LATEST NEWS
200 ಕೋಟಿ ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ದಂಪತಿ…!!
ಸೂರತ್ ಎಪ್ರಿಲ್ 15: ಗುಜರಾತ್‌ನ ಶ್ರೀಮಂತ ಜೈನ ದಂಪತಿಗಳು ಸುಮಾರು ₹ 200 ಕೋಟಿ ಆಸ್ತಿಯನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿ ಇದೀಗ ಸುದ್ದಿಯಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದರು ಮತ್ತು ಈ ತಿಂಗಳ ಕೊನೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ.
ಭವೇಶ್ ಭಾಯ್ ಭಂಡಾರಿ ಅವರು ಸಬರಕಾಂತದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದ ಯಾವುದೇ ಕಷ್ಟವನ್ನು ನೋಡದೇ ಬೆಳೆದಿದ್ದಾರೆ. ಭಾವೇಶ್ ಭಾಯ್ ಭಂಡಾರಿ ಅವರು ಕನ್ಸ್ಟ್ರಕ್ಷನ್ ವ್ಯವಹಾರವನ್ನು ಹೊಂದಿದ್ದು, ಅಹಮದಾಬಾದ್‌ನಲ್ಲೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದರು. ಭಾವೇಶ್ ಭಾಯ್ ಭಂಡಾರಿ ಅವರ ಕುಟುಂಬ ಜೈನ ಸಮುದಾಯದತ್ತ ಒಲವು ಹೊಂದಿತ್ತು. ಆಗಾಗ್ಗೆ ಅವರ ಕುಟುಂಬವು ಜೈನ ಮುನಿಗಳನ್ನು, ದೀಕ್ಷಿಕರನ್ನ ಭೇಟಿಯಾಗುತ್ತಿತ್ತು. ಇದೀಗ ಭಾವೇಶ್, ಅವರ ಪತ್ನಿ ಜೈನ ಸಮುದಾಯಕ್ಕೆ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಈಗ ದೀಕ್ಷೆ ತೆಗೆದುಕೊಂಡ ನಂತರ ಭಿಕ್ಷಾಟನೆಯಲ್ಲಿಯೇ ಜೀವನ ಕಳೆಯಲಿದ್ದಾರೆ. ಅಷ್ಟೇ ಅಲ್ಲ, ಫ್ಯಾನ್, ಎಸಿ, ಮೊಬೈಲ್ ಫೋನ್ ಇತ್ಯಾದಿ ಎಲ್ಲ ಸೌಕರ್ಯಗಳನ್ನೂ ತ್ಯಜಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈಗ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ತಿರುಗಾಡಬೇಕಾಗುತ್ತದೆ.
ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದ ಹಿಮ್ಮತ್‌ನಗರದ ಉದ್ಯಮಿ 2022ರಲ್ಲಿ ಸನ್ಯಾಸಿತ್ವ ಸ್ವೀಕರಿಸಿದ ತನ್ನ 19 ವರ್ಷದ ಮಗಳು ಮತ್ತು 16 ವರ್ಷದ ಮಗನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಅವರ ಸಮುದಾಯದ ಜನರು ಭವೇಶ್ ಮತ್ತು ಅವರ ಪತ್ನಿ ತಮ್ಮ ಮಕ್ಕಳಿಂದ ಸ್ಫೂರ್ತಿ ಪಡೆದಿದ್ದಾರೆ. ಏಪ್ರಿಲ್ 22 ರಂದು ಪ್ರತಿಜ್ಞೆಯನ್ನು ತೆಗೆದುಕೊಂಡ ನಂತರ, ದಂಪತಿಗಳು ಎಲ್ಲಾ ಕುಟುಂಬ ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ ಮತ್ತು ಯಾವುದೇ ‘ಭೌತಿಕ ವಸ್ತುಗಳನ್ನು’ ಇಟ್ಟುಕೊಳ್ಳಲು ಅನುಮತಿಸಲಾಗುವುದಿಲ್ಲ. ನಂತರ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ನಡೆಯುತ್ತಾರೆ ಮತ್ತು ಭಿಕ್ಷೆಯಿಂದ ಮಾತ್ರ ಬದುಕುತ್ತಾರೆ.