Connect with us

    FILM

    ಬಿಗ್ ಬಾಸ್ ನಲ್ಲಿ ಗೆದ್ದರೂ ಬಹುಮಾನದ ಅರ್ಧದಷ್ಟೂ ಹಣ ಕೊಟ್ಟಿಲ್ಲ

    ಮುಂಬೈ ಎಪ್ರಿಲ್  15:  ಕಿರುತೆರೆಯ ಹೈಬಜೆಟ್ ರಿಯಾಲಿಟಿ ಶೋ ಬಿಗ್ ಬಾಸ್ ಗೆದ್ದರೆ ಅದರ ಸೆಲೆಬ್ರೆಟಿಗಳಿಗೆ ಲಕ್ಷಾಂತರ ರೂಪಾಯಿ ಹಣ ಬರುತ್ತೆ ಅನ್ನೊಂದು ಎಲ್ಲರಿಗೂ ತಿಳಿದಿರುವ ಸತ್ಯ ಆದರೆ ಗೆದ್ದ ಹಣ ಸಂಪೂರ್ಣವಾಗಿ ವಿನ್ನರ್​ಗೆ ಸೇರುತ್ತಿಲ್ಲ. ‘ಬಿಗ್ ಬಾಸ್ ಮರಾಠಿ ಸೀಸನ್ 2’ರ ವಿನ್ನರ್ ಶಿವ್ ಠಾಕ್ರೆ ಅವರು ಈ ರೀತಿಯ ಆರೋಪ ಮಾಡಿದ್ದಾರೆ. ಅವರ ಹೇಳಿಕೆ ಶಾಕಿಂಗ್ ಎನಿಸಿದೆ.
    ಬಿಗ್ ಬಾಸ್ ಮರಾಠಿ ಸೀಸನ್ 2 ರಲ್ಲಿ ಸ್ಪರ್ಧಿಯಾಗಿದ್ದ ಶಿವಠಾಕ್ರೆ ಈ ಮೊದಲು ರೋಡಿಸ್’ ರಿಯಾಲಿಟಿ ಶೋ ಮೂಲಕ ಹಿಂದಿ ಹಾಗೂ ಮರಾಠಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದರು. ಇದೀಗ ಬಿಗ್ ಬಾಸ್ ಶೋದ ಮೋಸದ ಬಗ್ಗೆ ಮಾತನಾಡಿರುವ ಅವರು ಗೆದ್ದವರಿಗೆ 25 ಲಕ್ಷ ರೂಪಾಯಿ ಮೊತ್ತವನ್ನು ನಿಗದಿ ಮಾಡಲಾಗಿತ್ತು. ಅಂತಿಮ ಘೋಷಣೆಗೂ ಎರಡು ಗಂಟೆ ಮೊದಲು 17 ಲಕ್ಷ ರೂಪಾಯಿ ಸಿಗಲಿದೆ ಎಂದು ತಿಳಿಸಿದರು. ಆ ಬಳಿಕ ಅಕೌಂಟ್​ಗೆ ಬಂದಿದ್ದು 11 ಲಕ್ಷ ರೂಪಾಯಿ. ಬಟ್ಟೆ, ಹಾಗೂ ತಂದೆ-ತಾಯಿ ಬಂದಿದ್ದರ ವಿಮಾನದ ಟಿಕೆಟ್ ಖರ್ಚನ್ನು ನಮ್ಮದೇ ಹಣದಿಂದ ತೆಗೆದುಕೊಳ್ಳಲಾಗಿತ್ತು’ ಎಂದಿದ್ದಾರೆ ಶಿವ್ ಠಾಕ್ರೆ. ಇದು ಅನೇಕರಿಗೆ ಬೇಸರ ತರಿಸಿದೆ. ರಿಯಾಲಿಟಿ ತಿಳಿದ ಬಳಿಕ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.
    Share Information
    Advertisement
    Click to comment

    You must be logged in to post a comment Login

    Leave a Reply