LATEST NEWS
ಗುಜರಾತ್ ವಿಧಾನಸಭಾ ಚುನಾವಣೆ ಶಾಂತಿಯುತ ಮತದಾನ ಆರಂಭ
ಗುಜರಾತ್ ವಿಧಾನಸಭಾ ಚುನಾವಣೆ ಶಾಂತಿಯುತ ಮತದಾನ ಆರಂಭ
ಅಹ್ಮದಾಬಾದ್, ಡಿಸೆಂಬರ್ 09 : ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭಗೊಂಡಿತು. ಬೆಳಗ್ಗೆ 8 ಗಂಟೆಗೆ ಶಾಂತಿಯುತವಾಗಿ ಮತದಾನ ಆರಂಭಗೊಂಡಿದ್ದು, ಬಿರುಸಿನಿಂದ ಸಾಗುತ್ತಿದೆ.
ಮೊದಲನೇಯ ಹಂತದ ಚುನಾವಣೆಯಲ್ಲಿ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಗಳಿಗೆ ಒಳಪಟ್ಟ 89 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮೊದಲ ಹಂತದ ಚುನಾವಣಾ ಕಣದಲ್ಲಿ ಒಟ್ಟು 977 ಅಭ್ಯರ್ಥಿಗಳು ಇದ್ದು, ಸುಮಾರು 2.12 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಪ್ರಸ್ತುತ ಅಡಳಿತ ರೂಢ ಬಿಜೆಪಿ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರಲುಯತ್ನಿಸುತ್ತಿದೆ.
ಕಾಂಗ್ರೆಸ್ ಕೂಡ ಈ ಚುನಾವಣೆಯ ಮೂಲಕ ತನ್ನ ಭವಿಷ್ಯವನ್ನು ಉಜ್ವಲಗೊಳಿಸುವ ನಿರೀಕ್ಷೆಯನ್ನು ಹೊಂದಿದೆ.
ಡಿಸೆಂಬರ್ 14ರಂದುಉಳಿದ 93 ಸೀಟುಗಳ ನಿರ್ಧಾರಕ್ಕಾಗಿ ಎರಡನೇ ಹಂತದ ಮತದಾನ ಪ್ರಕ್ರೀಯೇಗಳು ನಡೆಯಲಿವೆ.
ಗುಜರಾತ್‌ನಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 182. ಮತ ಎಣಿಕೆ ಕಾರ್ಯ ಡಿ.18 ರಂದು ನಡೆಯಲಿದೆ.
ಈ ನಡುವೆ ಕೆಲವೆಡೆಗಳಲ್ಲಿ ಇಲೆಕ್ಟ್ರಾನಿಕ್ ಓಟಿಂಗ್ ಮಶೀನ್ (ಇವಿಎಂ) ಗಳು ದೋಷಯುಕ್ತವಾಗಿರುವುದು ಕಂಡು ಬಂದಿದೆ.
ಸೂರತ್‌ನ ವರಚ್ಚಾದ ಸರ್ದಾರ್ ಪಟೇಲ್ ವಿದ್ಯಾಲಯದ ಬೂತ್‌ನಲ್ಲಿ ಕೆಟ್ಟು ಹೋದ ಇವಿಎಂ ಅನ್ನು ಬದಲಾಯಿಸಲಾಗಿದೆ.