FILM
ಗ್ಯ್ರಾಮಿ ಅವಾರ್ಡ್ ಗೆ ಸಂಪೂರ್ಣ ಬೆ*ತ್ತ*ಲೆಯಾಗಿ ಬಂದ ಮಾಡೆಲ್
ಹಾಲಿವುಡ್ ನ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಫಂಕ್ಷನ್ ಗೆ ಮಾಡೆಲ್ ಒಬ್ಬಳು ಸಂಪೂರ್ಣ ಬೆತ್ತಲೆಯಾಗಿ ಆಗಮಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ. ರ್ಯಾಪರ್ ಕಾನ್ಯೆ ವೆಸ್ಟ್ ಪತ್ನಿ ಬಿಯಾಂಕಾ ಸೆನ್ಸೋರಿ ರೆಡ್ ಕಾರ್ಪೆಟ್ ಪೋಟೋಶೂಟ್ ವೇಳೆ ಸಂಪೂರ್ಣ ಪಾರದರ್ಶಕ ಡ್ರೆಸ್ ತೊಟ್ಟಿದ್ದು, ಇದೀಗ ಇಬ್ಬರನ್ನೂ ಗ್ರ್ಯಾಮಿ ಅವಾರ್ಡ್ ಫಂಕ್ಷನ್ ನಿಂದ ಹೊರಹಾಕಲಾಗಿದೆ.
ವೆಸ್ಟ್ ಅತ್ಯುತ್ತಮ ರಾಪ್ ಹಾಡಿಗೆ ನಾಮನಿರ್ದೇಶನಗೊಂಡಿದ್ದರಿಂದ ಈ ಜೋಡಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಬಿಯಾಂಕಾ ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದಾಗ ಅವರು ಕಪ್ಪು ಕಲರ್ ನ ಕೋಟ್ ಅನ್ನು ಧರಿಸಿದ್ದರು, ಬಳಿಕ ಪೋಟೋ ಶೂಟ್ ವೇಳೆ ಇದ್ದಕ್ಕಿದ್ದ ಹಾಗೆ ಜಾಕೆಟ್ ಅನ್ನು ತೆಗೆದಿದ್ದಾರೆ. ಈ ವೇಳೆ ಸಂಪೂರ್ಣ ದೇಹ ತೋರುವ ಪಾದರ್ಶಕವಾಗಿರುವ ಬಟ್ಟೆಯನ್ನು ಧರಿಸಿದ್ದರು.
ಇದನ್ನು ನೋಡಿ ಫೋಟೋಗ್ರಾಫರ್ಸ್ ಹಾಗೂ ಉಳಿದ ಮಂದಿ ಶಾಕ್ ಆಗಿದ್ದಾರೆ. ಬಿಯಾಂಕ ಅವರು ಖಾಸಗಿ ಅಂಗ ಕಾಣುವ, ತೆಳ್ಳಗಿನ ಬಟ್ಟೆಯನ್ನು ಮಾತ್ರ ಹಾಕಿಕೊಂಡಿದ್ದಾರೆ. ಈ ಬಟ್ಟೆಯಲ್ಲಿ ಅವರ ಖಾಸಗಿ ಅಂಗಗಳು ಸ್ಪಷ್ಟವಾಗಿ ಕಾಣುತ್ತದೆ. ಬಿಯಾಂಕ ಯಾವ ಮುಜುಗರವೂ ಇಲ್ಲದೆ ಪೋಟೋಗೆ ನಾನಾ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.
ಇದನ್ನು ನೋಡಿದ ಆಯೋಜಕರು ಕೂಡಲೇ ಕಾನ್ಯ ದಂಪತಿಗಳನ್ನು ಹೊರಗಡೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರಾಗಿಯೇ ಕಾರ್ಯಕ್ರಮದಿಂದ ಹೊರಗೆ ಹೋಗಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.
Blink twice if you need help #KanyeWest #BiancaCensori #YE #GRAMMYS2025 #Bianca #GrammyAwards #Grammy pic.twitter.com/uB2vk8WCaj
— RyuPixel – 竜ピクセル (@RyuPixelAi) February 3, 2025