LATEST NEWS
ಪತ್ರಕರ್ತೆ ಸಾಹಿತಿ ಗೌರಿ ಲಂಕೇಶ್ ಹತ್ಯೆ

ಬೆಂಗಳೂರು, ಸೆಪ್ಟೆಂಬರ್ 05 : ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ , ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಮನೆಯಲ್ಲೇ ನಡೆದಿದೆ. ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಸ್ಥಳದಲ್ಲೇ ಸಾವು. ಪ್ರಗತಿಪರರಾದ ಮಹಾರಾಷ್ಟ್ರದ ಗೋವಿಂದ್ ಪನ್ಸಾರ್, ಧಾರವಾಡದ ಎಂ.ಎನ್.ಕಲಬುರ್ಗಿ ಹತ್ಯೆ ಈಗಾಗಲೇ ನಡೆದಿದ್ದು, ಪ್ರಗತಿಪರರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ.
ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಗತಿಪರ ಸಾಹಿತಿಗಳು ಗೌರಿ ಲಂಕೇಶ್ ಸಾವಿಗೆ ತೀವೃ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಎದುರು ನಿಂತಿದ್ದ ಸಂದರ್ಭದಲ್ಲಿ ವಾಹನ ವೊಂದರಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಅತೀ ಸಮೀಪದಿಂದ ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಮಾಹಿತಿಯ ಪ್ರಕಾರ ಗೌರಿ ಲಂಕೇಶ ರ ಮೇಲೆ 7 ಸುತ್ತು ಗುಂಡು ಹಾರಿಸಲಾಗಿದ್ದು , ಮೂರು ಗುಂಡುಗಳು ಅವರ ಎದೆಯ ಭಾಗಕ್ಕೆ ತಗುಲಿದೆ.
ಈ ಹಿನ್ನಲೆಯಲ್ಲಿ ಗೌರಿ ಲಂಕೇಶ್ ಸ್ಥಳದ್ಲಲೇ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಗುಂಡು ಹಾರಿಸಿ ಬಳಿಕ ದುಷ್ಕರ್ಮಿಗಳು ವಾಹನದಲ್ಲಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಗೌರಿ ಲಂಕೇಶ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.