Connect with us

LATEST NEWS

ಗೌಡ ಸಾರಸ್ವತ ಸಂಪ್ರದಾಯಯುಕ್ತ ವಿಶ್ವವಸು ಕ್ಯಾಲೆಂಡರ್ ಅನಾವರಣ

ಮಂಗಳೂರು: ಮಂಗಳೂರಿನ ಡೊಂಗೇರಕೇರಿಯ ವೇದಮೂರ್ತಿ ಶ್ರೀ ದಿನೇಶ್ ಭಟ್ ರವರ ನಿವಾಸದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ಸಮ್ಮುಖದಲ್ಲಿ ಹಿಂದೂ ಪಂಚಾಂಗ ಆಧಾರಿತ ವಿಶ್ವವಸು ಕ್ಯಾಲೆಂಡರನ್ನು ಮಾರ್ಚ್ 9, 2025 ರಂದು ಬಿಡುಗಡೆ ಮಾಡಲಾಯಿತು. ಪೈ ಸೇಲ್ಸ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಟಿ. ಗಣಪತಿ ಪೈ, ಡಿವಿಕೆ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಶ್ರೀ ಡಿ. ವಾಸುದೇವ್ ಕಾಮತ್ ಮತ್ತು ಇನ್ನಿತರ ಹಲವಾರು ಗಣ್ಯ ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಂಡು ಶುಭಾಶಯಗಳನ್ನು ಹಾರೈಸಿದರು.

ವೇದಮೂರ್ತಿ ಎಂ. ದಿನೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಕ್ಯಾಲೆಂಡರ್‌ನ್ನು ರಚಿಸಿದ ಹಾಗೂ ಸಂಪಾದಕರಾದ ಶ್ರೀ ಎಂ.ನರಸಿಂಹ ಭಟ್ ಅವರು ಚಂದ್ರಮಾನ ಯುಗಾದಿಯಿಂದ ಪ್ರಾರಂಭವಾಗುವ ಈ ಕ್ಯಾಲೆಂಡರನ್ನು ಅನುಸರಿಸುವ ಮಹತ್ವವನ್ನು ವಿವರಿಸಿದರು. ಈ ಕ್ಯಾಲೆಂಡರ್ ಪಂಚಾಗ ಮಾಸಗಳ ಪ್ರಕಾರ ತಿಂಗಳುಗಳನ್ನು ಒಳಗೊಂಡಿದ್ದು, ಉದಾಹರಣೆಗೆ ಚೈತ್ರಾ, ವೈಶಾಕಾದಿಂದ ಫಲ್ಗುನಾ ವರೆಗೆ, ತಿಥಿ, ನಕ್ಷತ್ರ ಮತ್ತು ಹಲವಾರು ಪ್ರಮುಖ ದಿನಗಳನ್ನು ಎತ್ತಿ ತೋರಿಸುದಲ್ಲದೆ, ಏಕಾದಶಿ ದಿನಾಂಕಗಳನ್ನು ಕೆಂಪು ಬಣ್ಣದ ಅಕ್ಷರದಲ್ಲಿ ಗುರುತಿಸಲಾಗಿದೆ ಮತ್ತು ಆ ದಿನಗಳಲ್ಲಿ ಉಪವಾಸ ಮಾಡಲು ನಮನ್ನೆಲ್ಲ ನೆನಪಿಸುವುದು. ಈ ಪ್ರಮುಖ ಸಂಪ್ರದಾಯಗಳನ್ನು ಅನುಸರಿಸಲು ಮತ್ತು ಸಂರಕ್ಷಿಸಲು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪ್ರೇರಣೆ ನೀಡುವ ಈ ಕ್ಯಾಲೆಂಡರಿನ ಅಗತ್ಯವನ್ನು ಶ್ರೀ ಎಂ.ನರಸಿಂಹ ಭಟ್ ರವರು ಇ ಸಂಧರ್ಭದಲ್ಲಿ ಒತ್ತಿ ಹೇಳಿದರು. ವಿಶ್ವವಸು ಕ್ಯಾಲೆಂಡರ್‌ನ ಪ್ರತಿಯನ್ನು ಪಡೆಯುವ ಮೂಲಕ ನಮ್ಮ ಗೌಡ ಸಾರಸ್ವತ ಸಮಾಜದ ಶ್ರೀಮಂತ ಪರಂಪರೆಯನ್ನು ಆಚರಿಸಲು ಹಾಗೂ ಸಂರಕ್ಷಿಸಲು ಎಲ್ಲಾ ಸಮಾಜಭಂದವರಲ್ಲಿ ವಿನಮ್ರವಾಗಿ ವಿನಂತಿಸಿದರು.

ಇದೆ ಬರುವ ಚಂದ್ರಮಾನ ಯುಗಾದಿಯ ದಿನ ಅಂದರೆ ಮಾರ್ಚ್ 30, 2025 ರಂದು ವಿವಿಧ ದೇವಾಲಯಗಳಲ್ಲಿ ವಿಶ್ವವಸು ಕ್ಯಾಲೆಂಡರಿನ ಪ್ರತಿ ಯನ್ನು ಉಚಿತವಾಗಿ ವಿತರಿಸಲಾಗುವುದು ಹಾಗೂ ದೂರ ಪ್ರದೇಶ ದಲ್ಲಿ ವಾಸಿಸುವವರಿಗೆ PDF ಪ್ರತಿಗಳನ್ನು ಸಹ ವಿನಂತಿಸಿ ಪಡೆಯಬಹುದೆಂದು ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದರು.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *