Connect with us

    LATEST NEWS

    ಆರ್ಥಿಕ ಹೊರೆ ತಡೆಗೆ ಕೇಂದ್ರದಿಂದ ಅನಗತ್ಯ ಖರ್ಚಿಗೆ ಕತ್ತರಿ…

    ನವದೆಹಲಿ, ಸೆಪ್ಟಂಬರ್ 3: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ಅಧೀನ ಇಲಾಖೆಗಳಲ್ಲಿ ಅನಗತ್ಯ ಖರ್ಚು ತಡೆಯಲು ಮುಂದಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಹಿನ್ನಲೆಯಲ್ಲಿ ಎಲ್ಲಾ ಇಲಾಖೆಗಳಿಗೆ ಪತ್ರ ಬರೆದಿದ್ದು, ಇಲಾಖೆಯಿಂದ ಆಗುತ್ತಿರುವ ಎಲ್ಲಾ ಅನಗತ್ಯ ಖರ್ಚುಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದೆ.

    ಮುಖ್ಯವಾಗಿ ಎಲ್ಲಾ ಇಲಾಖೆಗಳು ಹೊಸ ವರ್ಷದ ಕ್ಯಾಲೆಂಡರ್, ಡೈರಿ, ಗ್ರೀಟಿಂಗ್ ಕಾರ್ಡ್ , ಕಾಫಿ ಟೇಬಲ್ ಬುಕ್ಸ್ ಗಳನ್ನು ಮುಂದಿನ ಆದೇಶದ ವರೆಗೆ ಮುದ್ರಿಸುವಂತಿಲ್ಲ ಎಂದು ತಿಳಿಸಿದೆ. ಈ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಡಿಜಿಟಲ್ ರೂಪದಲ್ಲಿ ತಯಾರಿಸಿ ಹಂಚುವಂತೆ ಸೂಚನೆಯನ್ನೂ ನೀಡಿದೆ. ಈ ಎಲ್ಲಾ ವ್ಯವಸ್ಥೆಗಳಿಗಾಗಿ ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳು ಖರ್ಚಾಗುತ್ತಿರುವುದನ್ನು ಮನಗಂಡ ಹಣಕಾಸು ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.

    ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಜನರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಘೋಷಿಸಿದ ಹಲವಾರು ಯೋಜನೆ, ಜಿಡಿಪಿಯಲ್ಲಿ ದಾಖಲೆಯ ಕುಸಿತ ಮೊದಲಾದ ವಿಚಾರಗಳನ್ನು ದೃಷ್ಠಿಯಲ್ಲಿಟ್ಟು ಕೇಂದ್ರ ಸರಕಾರ ಈ ಸೂಚನೆಯನ್ನು ಹೊರಡಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply