Connect with us

    DAKSHINA KANNADA

    ಶಿವ ಕುಮಾರ ಸ್ವಾಮೀಜಿ ಶಿವೈಕ್ಷ್ಯ ಹಿನ್ನಲೆ, ನಾಳೆ ರಾಜ್ಯದಾದ್ಯಂತ ಸರಕಾರಿ ರಜೆ ಘೋಷಣೆ, ಅಂತಿಮ ದರ್ಶನಕ್ಕೆ ನಾಳೆ ಪ್ರಧಾನಿ ಮೋದಿ ಆಗಮನ

    ಶಿವ ಕುಮಾರ ಸ್ವಾಮೀಜಿ ಶಿವೈಕ್ಷ್ಯ ಹಿನ್ನಲೆ, ನಾಳೆ ರಾಜ್ಯದಾದ್ಯಂತ ಸರಕಾರಿ ರಜೆ ಘೋಷಣೆ, ಅಂತಿಮ ದರ್ಶನಕ್ಕೆ ನಾಳೆ ಪ್ರಧಾನಿ ಮೋದಿ ಆಗಮನ

    ಮಂಗಳೂರು, ಜನವರಿ 21: ನಡೆದಾಡುವ ದೇವರೆಂದೇ ಹೆಸರುವಾಸಿಯಾದ ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ದೇವರ ಪಾದ ಸೇರಿದ್ದಾರೆ.

    ಕಳೆದ ಕೆಲವು ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಭಾರೀ ವೆತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಮಠದ ಆಸ್ಪತ್ರೆಯಲ್ಲೇ ತೀವೃ ನಿಗಾ ಘಟಕದಲ್ಲಿದ್ದರು.

    1907 ಎಪ್ರಿಲ್ 1 ರಂದು ಮಾಗಡಿ ತಾಲೂಕಿನ ವಿರಾಪುರದಲ್ಲಿ ಜನಿಸಿದ ಡಾ. ಶಿವಕುಮಾರ್ ಅವರಿಗೆ 111 ವರ್ಷ ವಯಸ್ಸಾಗಿತ್ತು.

    ತನ್ನ ಧಾರ್ಮಿಕ ಕಾರ್ಯಕ್ರಮಗಳಿಗಿಂತಲೂ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಮಾಡುವ ಮೂಲಕ ಗಮನ ಸೆಳೆದ ಸ್ವಾಮೀಜಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಪಾಲಿನ ಅಕ್ಷರ ದೇವತೆಯಾಗಿದ್ದರು.

    ಬಡ ಹಾಗೂ ಅನಾಥ ಮಕ್ಕಳಿಗೆ ಆಶ್ರಯದಾತರೂ ಆಗಿದ್ದ ಶ್ರೀಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇದೀಗ ಸಮಾಜದ ಉನ್ನತ ಸ್ತರದಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ರೀಗಳಿಗೆ ಶಿಕ್ಷಣದ ಮೇಲಿದ್ದ ಕಾಳಜಿಯನ್ನು ತೋರಿಸುತ್ತಿತ್ತು.

    ಅಕ್ಷರ ದಾಸೋಹ, ಶಿಕ್ಷಣದ ಮೂರ್ತರೂಪ ಸ್ವಾಮೀಜಿ ಅಗಲಿಕೆ ಇಡೀ ದೇಶವನ್ನೇ ದುಖದ ಮಡುವಿಗೆ ದೂಡಿದೆ.

    ಸ್ವಾಮೀಜಿಯವರ ಅಂತ್ಯಕ್ರಿಯೆ ನಾಳೆ ತುಮಕೂರು ಮಠದಲ್ಲೇ ನಡೆಯಲಿದೆ.

    ಸ್ವಾಮೀಜಿ ಅಗಲಿಕೆ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಸರಕಾರಿ ರಜೆಯನ್ನು ಘೋಷಣೆ ಮಾಡಿದೆ. ನಾಳೆ ನಡೆಯುವ ಸ್ವಾಮಿಗಳ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ತುಮಕೂರ ಮಠಕ್ಕೆ ಆಗಮಿಸಲಿದ್ದಾರೆ .

    ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯನ್ನೂ ನಡೆಸಲು ಸರಕಾರ ತೀರ್ಮಾನಿಸಿದ್ದು, ಸಕರ ಸರಕಾರಿ ಗೌರವದೊಂದಿಗೆ ರಾಜ್ಯ ಸರಕಾರ ಅಂತ್ಯಕ್ರೀಯೆ ನಡೆಯಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *