Connect with us

DAKSHINA KANNADA

ಶಿವಕುಮಾರ ಸ್ವಾಮಿ ಲಿಂಗೈಕ್ಯ, ಪ್ರಧಾನಿ ನರೇಂದ್ರ ಮೋದಿ ಸಂತಾಪ

ಶಿವಕುಮಾರ ಸ್ವಾಮಿ ಲಿಂಗೈಕ್ಯ, ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮಂಗಳೂರು, ಜನವರಿ 21: ತುಮಕೂರು ಸಿದ್ದಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ನಿಧನದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ತನ್ನ ಸಂತಾಪ ಸೂಚಿಸಿದ್ದಾರೆ.

ಬಡ ಹಾಗೂ ಅನಾಥರಿಗೆ ಶಿಕ್ಷಣ ಹಾಗೂ ಆರೋಗ್ಯ ಕಲ್ಪಿಸುವ ಮೂಲಕ ಸಹಾನುಭೂತಿಯ ಮೂರ್ತರೂಪದಂತಿದ್ದ ಶಿವಕುಮಾರ ಸ್ವಾಮೀಜಿಯವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಅಪಾರ ಭಕ್ತ ಸಮೂಹಕ್ಕೆ ದೇವರು ಕರುಣಿಸಲಿ.

ಸ್ವಾಮೀಜಿಯವರನ್ನು ಭೇಟಿಯಾಗುವ ಅವಕಾಶ ತಮ್ಮ ಪಾಲಿಗೆ ದೊರೆತಿದ್ದು, ಬಡವರಿಗಾಗಿ, ಅನಾಥರಿಗಾಗಿ ಅವರ ಹೃದಯ ಮಿಡಿಯುತ್ತಿತ್ತು.

ಬಡತನ, ಹಸಿವು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ

Facebook Comments

comments