Connect with us

LATEST NEWS

ಉಡುಪಿಯ ವಡ್ಡರ್ಸೆ ಗ್ರಾಮದಲ್ಲಿ ಕಾಣಿಸಿಕೊಂಡ ಗೋರಿಲ್ಲಾ…!?

ಉಡುಪಿ, ಜನವರಿ 06: ಉಡುಪಿ ಜಿಲ್ಲೆ ಕೋಟ ಸಮೀಪದ ವಡ್ಡರ್ಸೆ ಗ್ರಾಮದಲ್ಲಿ ವಿಚಿತ್ರ ವಿದ್ಯಮಾನವೊಂದು ಸಂಭವಿಸಿದೆ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಗೋರಿಲ್ಲಾವನ್ನು ಕಂಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ.

ಇಲ್ಲಿನ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಭಾರೀ ಗಾತ್ರದ ಗೋರಿಲ್ಲಾ ಕಾಣಿಸಿಕೊಂಡಿದೆಯಂತೆ. ಸ್ಥಳೀಯರೊಬ್ವರು ಮೊಬೈಲ್ ನಲ್ಲಿ ಸೆರೆಹಿಡಿದಿರುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದಾಗ ಗೋರಿಲ್ಲ ಮಾಯವಾಗಿತ್ತು.

ಎಂಟು ಎಕರೆ ಪ್ರದೇಶದ ಈ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ನಂತರ ಗೋರಿಲ್ಲಾ ಪತ್ತೆಯಾಗಿಲ್ಲ. ಪಕ್ಕದಲ್ಲೇ ದಟ್ಟ ಅರಣ್ಯ ಪ್ರದೇಶವೂ ಇರುವುದರಿಂದ ಜನರ ಆತಂಕ ಹೆಚ್ಚಿದೆ. ಆದರೆ ಈ ಭಾಗದಲ್ಲಿ ಈವರೆಗೆ ಯಾರೂ ಗೋರಿಲ್ಲವನ್ನು ಕಂಡಿರಲಿಲ್ಲ. ಮರದ ಮರೆಯಲ್ಲಿ ನಿಂತ ಭಾರೀ ಗಾತ್ರದ ಗೋರಿಲ್ಲದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಗೋರಿಲ್ಲ ಕಾಣಿಸಿಕೊಳ್ಳುವ ಸಾಧ್ಯತೆ ಇರದ ಕಾರಣ ಇದೇನಾದರೂ ಕಿಡಿಗೇಡಿಗಳ ಕೃತ್ಯವೇ ಎಂಬುದು ತನಿಖೆಯಾಗಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *