KARNATAKA
ಕ್ಯಾನ್ಸರ್ ರೋಗಿಗಳಿಗೆ ಶುಭ ಸುದ್ದಿ- ಕೇವಲ 7 ನಿಮಿಷಗಳ ಕಡಿಮೆ ವೆಚ್ಚದ ಕ್ಯಾನ್ಸರ್ ಚಿಕಿತ್ಸೆ ಅವಿಷ್ಕಾರ.!
ವಿಶ್ವದ ಮನು ಕುಲವನ್ನೇ ತಲ್ಲಣಗೊಳಿಸಿದ ಮಹಾ ಮಾರಿ ಕ್ಯಾನ್ಸರ್ ರೋಗಿಗಳಿಗೆ ಶುಭ ಮತ್ತು ಅಶಾದಾಯಕ ಸುದ್ದಿಯೊಂದು ಇಂಗ್ಲೆಂಡ್ ನಿಂದ ಹೊರ ಬಿದ್ದಿದೆ.
ಲಂಡನ್ : ವಿಶ್ವದ ಮನು ಕುಲವನ್ನೇ ತಲ್ಲಣಗೊಳಿಸಿದ ಮಹಾ ಮಾರಿ ಕ್ಯಾನ್ಸರ್ ರೋಗಿಗಳಿಗೆ ಶುಭ ಮತ್ತು ಅಶಾದಾಯಕ ಸುದ್ದಿಯೊಂದು ಇಂಗ್ಲೆಂಡ್‌ನಿಂದ ಹೊರ ಬಿದ್ದಿದೆ.
ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ನಿರ್ಣಾಯಕ ಆವಿಷ್ಕಾರ ಒಂದನ್ನು ಇಂಗ್ಲೆಂಡ್ ನ ವೈದ್ಯಕೀಯ ತಜ್ಞರು ಕಂಡು ಹುಡುಕಿದ್ದು ರೋಗಿಗಳಿಗೆ ಹೊಸ ಆಶಾ ಭಾವನೆಯನ್ನು ಹುಟ್ಟು ಹಾಕಿದೆ.
ಕ್ಯಾನ್ಸರಿಗೆ ರಾಮ ಬಾಣದಂತಿರುವ ಈ ಒಂದೇ ಚುಚ್ಚುಮದ್ದು ಕ್ಯಾನ್ಸರ್ ಚಿಕಿತ್ಸೆಯ ಸಮಯವನ್ನು ಮೂರನೇ ಒಂದು ಭಾಗದಷ್ಟು ಕಡಿತಗೊಳಿಸುತ್ತದೆ,
ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಇದನ್ನು ಒದಗಿಸಿದ್ದು ಕ್ಯಾನ್ಸರ್ ವಿರುದ್ದ ವಿಶ್ವದಲ್ಲಿ ಇದೇ ಮೊದಲ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (MHRA) ಯಿಂದ ಅನುಮೋದನೆ ಪಡೆದ ನಂತರ ಚುಚ್ಚುಮದ್ದನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು NHS ಹೇಳಿದೆ.
ನೂರಾರು ರೋಗಿಗಳಿಗೆ ಚುಚ್ಚುಮದ್ದು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು. ಇದು ಚರ್ಮದ ಅಡಿಯಲ್ಲಿ ನೀಡಲಾಗುವ ಚುಚ್ಚುಮದ್ದಾಗಿದೆ. ಇಮ್ಯುನೋಥೆರಪಿ ಅಡಿಯಲ್ಲಿ ನೀಡುವ ಚಿಕಿತ್ಸೆಯಾಗಿದೆ.
ಶ್ವಾಸಕೋಶ , ಕರುಳಿನ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಈ ಮದ್ದು ಪರಿಣಾಮಕಾರಿ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಅಟೆಝೋಲಿಝುಮಾಬ್ (ಅಟೆಝೋಲಿಜುಮಾಬ್) ಅಥವಾ ಟೆಸೆಂಟ್ರಿಕ್ (ಟೆಸೆಂಟ್ರಿಕ್) ವಿಧಾನದೊಂದಿಗೆ, ರೋಗಿಗಳಿಗೆ ಡ್ರಿಪ್ ಮೂಲಕ ನೇರವಾಗಿ ಅವರ ರಕ್ತನಾಳಗಳಿಗೆ ಔಷಧವನ್ನು ನೀಡಲಾಗುತ್ತದೆ.
ಈ ಚಿಕಿತ್ಸೆಯು 30 ನಿಮಿಷದಿಂದ ಒಂದು ಗಂಟೆಯವರೆಗೆ ಇರುತ್ತದೆ.
ಕೆಲವು ರೋಗಿಗಳಿಗೆ ಇಂಟ್ರಾವೆನಸ್ ಮೂಲಕ ಔಷಧಿಗಳನ್ನು ಪ್ರವೇಶಿಸಲು ಕಷ್ಟವಾಗಬಹುದು. “ಪ್ರಸ್ತುತ ವಿಧಾನಕ್ಕೆ ಹೋಲಿಸಿದರೆ, ಈ ಇಂಜೆಕ್ಷನ್ ಕೇವಲ ಏಳು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ” ಎಂದು ರೋಚೆ ಪ್ರಾಡಕ್ಟ್ಸ್ ಲಿಮಿಟೆಡ್‌ನ ವೈದ್ಯಕೀಯ ನಿರ್ದೇಶಕ ಮಾರಿಯಸ್ ಸ್ಕೋಲ್ಜ್ ಹೇಳಿದ್ದಾರೆ.
ಹೊಸ ಅಟೆಝೋಲಿಜುಮಾಬ್ ಅನ್ನು ರೋಚೆ ಕಂಪನಿಯಾದ ಜೆನೆಂಟೆಕ್ ತಯಾರಿಸಿದೆ.
ಇದು ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚುವ ಮತ್ತು ನಾಶಪಡಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧವಾಗಿದೆ.
ಹೊಸ ವಿಧಾನದಿಂದ, ರೋಗಿಗಳು ಅನುಕೂಲಕರ ಮತ್ತು ತ್ವರಿತ ಚಿಕಿತ್ಸೆ ಪಡೆಯಬಹುದು. ಮತ್ತು ದುಬಾರಿ ಕ್ಯಾನ್ಸರ್ ಔಷಧದ ಖರ್ಚುವೆಚ್ಚಗಳಲ್ಲಿ ಗಣನೀಯ ಕಡಿತವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.