Connect with us

LATEST NEWS

ಹೇರ್ ಬ್ಯಾಂಡ್ ನಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮ ಸಾಗಾಟಕ್ಕೆ ಯತ್ನ – ಆರೋಪಿ ಮಂಗಳೂರು ಕಸ್ಟಮ್ಸ್ ಬಲೆಗೆ

ಮಂಗಳೂರು ಅಗಸ್ಟ್ 21: ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡಲು ಹೊಸ ಹೊಸ ತಂತ್ರಗಳಿಗೆ ಸ್ಮಗ್ಲರ್ ಗಳು ಮೊರೆ ಹೋಗುತ್ತಿದ್ದು,ಸ ಇದೀಗ ಅಂತಹುದೆ ಹೊಸ ಐಡಿಯಾ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಹೇರ್ ಬ್ಯಾಂಡ್​ನಲ್ಲಿ ಚಿನ್ನ ಇಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.


ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿದ್ದ ಮುರುಡೇಶ್ವರದ ಪ್ರಯಾಣಿಕ ಈ ಹೊಸ ವಿಧಾನದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನಿಸಿ ಮಂಗಳೂರು ಕಸ್ಟಮ್ಸ್ ಅಧಿಕಾರಗಳಿಗೆ ಸಿಕ್ಕಿಬಿದ್ದಿದ್ದಾನೆ.


ಈತ ತಪಾಸಣೆ ಮಾಡುವ ಸಂದರ್ಭದಲ್ಲಿ ಮಹಿಳೆಯರ ಹೇರ್ ಬ್ಯಾಂಡ್ ಸಿಕ್ಕಿದೆ. ಹೇರ್ ಬ್ಯಾಂಡ್​ನ ಮೇಲ್ಬಾಗದಲ್ಲಿ ತಂತಿ ರೂಪದಲ್ಲಿ ಚಿನ್ನವನ್ನು ಅಡಗಿಸಿ ತಂದಿದ್ದಾನೆ. ಇದನ್ನು ತಪಾಸಣೆ ನಡೆಸಿದಾಗ 115 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ರೂ 5,58,900 ಎಂದು ಅಂದಾಜಿಸಲಾಗಿದೆ.

Advertisement
Click to comment

You must be logged in to post a comment Login

Leave a Reply