LATEST NEWS
ರೈಲಿನಲ್ಲಿ ಚಿನ್ನ ದರೋಡೆ : ಪ್ರಕರಣವನ್ನು ಭೇದಿಸಿದ ಉಡುಪಿ ಪೋಲಿಸರು

ರೈಲಿನಲ್ಲಿ ಚಿನ್ನ ದರೋಡೆ : ಪ್ರಕರಣವನ್ನು ಭೇದಿಸಿದ ಉಡುಪಿ ಪೋಲಿಸರು
ಉಡುಪಿ, ಡಿಸೆಂಬರ್ 05 : ಎರಡು ತಿಂಗಳ ಹಿಂದೆ ನಡೆದ ರೈಲು ದರೋಡೆ ಪ್ರಕರಣವನ್ನು ಉಡುಪಿ ಪೊಲೀಸರು ಭೇದಿಸಲು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಏಳು ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಉಡುಪಿ ಎಸ್ ಪಿ ಡಾ. ಸಂಜೀವ ಪಾಟೀಲ್ ಅವರು ಮಾಹಿತಿ ನೀಡಿದರು.

ಸುಮಾರು ಎರಡುವರೆ ತಿಂಗಳ ಹಿಂದೆ ಮುಂಬೈ – ತಿರುವನಂತಪುರ ನೇತೃವತಿ ಎಕ್ಸ್ ಪ್ರೆಸ್ ನಲ್ಲಿ ಮುಂಬೈಯಿಂದ ಕೇರಳಕ್ಕೆ ಚಿನ್ನವನ್ನು ಸಾಗಿಸಲಾಗುತ್ತಿತ್ತು.
ಈ ಸಂದರ್ಭ ಮುಂಬಯಿಯ ಜಿ.ಎಂ.ಗೋಲ್ಡ್ ನ ಸೇಲ್ಸ್ ಮ್ಯಾನ್ ಆಗಿದ್ದ ರಾಜೇಂದ್ರ ಅವರನ್ನು ಗಾಯಗೊಳಿಸಿ 4.112 ಕೆ.ಜಿ. ಚಿನ್ನಾಭರಣ ಇರುವ ಸೂಟ್ ಕೇಸನ್ನು ದರೋಡೆಕೋರರು ಕದ್ದೊಯ್ದಿದ್ದರು.
ಈ ಬಗ್ಗೆ ಉಡುಪಿಯ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಘಟನೆ ಸಂಬಂಧ ಎರಡೂವರೆ ತಿಂಗಳ ಬಳಿಕ ಆರೋಪಿಗಳ ಬಂಧನವಾಗಿದೆ.
ಬಂಧಿತರನ್ನು ಮಿಥುನ್, ಪಿಂಟೂ ಅರ್ಜುನ್, ಯೋಗೀಶ್ವರ್ ಸಿಂಗ್, ಮುಖ್ತಾರ್ ಇಬ್ರಾಹಿಂ, ರಿಯಾಝ್, ಪಿ.ಕೆ.ಮುರುಗನ್, ಪ್ರಭುಲಾಲ್ ಎಂದು ಗುರುತ್ತಿಸಲಾಗಿದೆ.
ಬಂಧಿತರಿಂದ 1.60kg ಚಿನ್ನ, ಒಂದು ರಿವಾಲ್ವರ್, 2 ಜೀವಂತ ಗುಂಡು, ಒಂದು ಕಾರು, ಮೊಬೈಲ್ , ಚಾಕು ವಶ ಪಡೆಯಲಾಗಿದೆ ಎಂದರು.
ಈ ಎಲ್ಲಾ ಆರೋಪಿಗಳು ವಿವಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮುಂಬೈ ಜಿ.ಎಂ.ಗೋಲ್ಡ್ ಮಾಲಕನ ಮೇಲಿನ ದ್ವೇಷದಿಂದ ಮಾಡಿದ್ದ ಕೃತ್ಯ ಇದಾಗಿದ್ದು, ಬಂಧಿತ ಯೋಗೀಶ್ವರ್ ಸಿಂಗ್ ಈ ಹಿಂದೆ ಜಿ.ಎಂ.ಗೋಲ್ಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ.
ಇನ್ನೂ ಹಲರು ಜನರ ಬಂಧನವಾಗಬೇಕಿದ್ದು, ಶೋಧ ಮುಂದುವರೆದಿದೆ. ಈ ಆರೋಪಿಗಳ ಪತ್ತೆಗೆ ಹಲವು ರಾಜ್ಯಗ ಳಿಗೆ ಪೊಲೀಸ್ ತಂಡ ತೆರಳಿದೆ ಎಂದು ಸಂಜೀವ್ ಪಾಟೀಲ್ ಮಾಹಿತಿ ನೀಡಿದರು.