LATEST NEWS
ಮಂಗಳೂರಿನಲ್ಲಿ ಬರೋಬ್ಬರಿ 19 ಕೋಟಿ ಬೆಲೆಬಾಳುವ ಚಿನ್ನಾಭರಣದ ಏಲಂ
ಮಂಗಳೂರು ಅಗಸ್ಟ್ 19: ಕೊರೊನಾ ಆರ್ಥಿಕ ಸಂಕಷ್ಟದ ನಡುವೆ ಮಂಗಳೂರಿನಲ್ಲಿ ಪೇಪರ್ ಕಟ್ಟಿಂಗ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದ ಬರೋಬ್ಬರಿ 19 ಕೋಟಿ ಚಿನ್ನದ ಏಲಂ ನೋಟಿಸ್ ಇದಾಗಿದೆ.
ಈಗ ಕೆನರಾ ಬ್ಯಾಂಕ್ ಆಗಿ ಪರಿವರ್ತನೆಗೊಂಡಿರುವ ಪಣಂಬೂರಿನ ಸಿಂಡಿಕೇಟ್ ಬ್ಯಾಂಕ್ ಬ್ರ್ಯಾಂಚ್ ಪತ್ರಿಕೆಗಳಲ್ಲಿ ನೀಡಿರುವ ಚಿನ್ನಾಭರಣ ಏಲಂ ನೋಟಿಸೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೈ ನಿವಾಸಿಯೊಬ್ಬರು ಈ ಬ್ಯಾಂಕ್ ನಲ್ಲಿ ಚಿನ್ನಾಭರಣ ಅಡಮಾನ ಇಟ್ಟು ಕೋಟಿಗಟ್ಟಲೆ ಹಣ ಪಡೆದಿದ್ದರು. ಆದರೆ ಹಣ ಪಾವತಿ ಮಾಡಲಾಗದ ಕಾರಣ ಈಗ ಸಾಲದ ಒಟ್ಟು ಹಣಕ್ಕಾಗಿ ಬ್ಯಾಂಕ್ ಅವರ ಎಲ್ಲಾ ಚಿನ್ನಾಭರಣಗಳನ್ನು ಏಲಂ ಇಟ್ಟಿದೆ. ಈ ಕುರಿತಂತೆ ದಿನಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದೆ. ಇದೆ ತಿಂಗಳ 20ನೇ ತಾರಿಖಿನಂದು ಮಧ್ಯಾಹ್ನ 3 ಗಂಟೆಗೆ ಈ ಏಲಂ ನಡೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಆದರೆ ಸದ್ಯ ಜನರ ಕುತೂಹಲಕ್ಕೆ ಕಾರಣವಾಗಿದ್ದು, ಏಲಂ ಒಟ್ಟು ಮೊತ್ತ, ಸುಮಾರು 10 ಬಾರಿ ಸಾಲ ತೆಗೆದುಕೊಂಡಿರುವ ಇವರು ಒಟ್ಟು ಬಾಕಿ 19 ಕೋಟಿಯ 76 ಲಕ್ಷ 41 ಸಾವಿರ 741 ರೂಪಾಯಿ ಆಗಿದೆ.
ಕೊರೊನಾ ಆರ್ಥಿಕ ಸಂಕಷ್ಟ ಕಾಲದಲ್ಲಿ ಇಷ್ಟೊಂದು ಮೊತ್ತದ ಹಣದ ಚಿನ್ನಾಭರಣ ಏಲಂಗೆ ಬಂದಿರುವುಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಇಷ್ಟು ಪ್ರಮಾಣ ಚಿನ್ನ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.