Connect with us

    KARNATAKA

    ಬೆಂಗಳೂರು ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂಪಾಯಿ ಫೈನ್

    ಬೆಂಗಳೂರು ಅಕ್ಟೋಬರ್ 06: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಾಗಿ ಬೆಂಗಳೂರಿನ ಮೆಟ್ರೋದಲ್ಲಿ ಗೋಬಿ ತಿಂದ ವ್ಯಕ್ತಿಯೊಬ್ಬರಿಗೆ ಪೊಲೀಸ್ ಠಾಣೆಗೆ ಕರೆಸಿ 500 ದಂಡ ವಿಧಿಸಲಾಗಿದೆ.


    ಸುನೀಲ್ ಕುಮಾರ್ ಮತ್ತು ಅವರ ಸ್ನೇಹಿತರು ಜಯನಗರದ ಪ್ರಮುಖ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತೀನಿತ್ಯ ಕೆಲಸಕ್ಕೆ ತೆರಳಲು ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಮೆಟ್ರೋ ಹತ್ತಿದ್ದರು. ಮಂಗಳವಾರ ಕೂಡ ಮೆಟ್ರೋ ರೈಲು ಹತ್ತಿದ್ದು, ಈ ವೇಳೆ ಸುನೀಲ್ ಅವರು ಮೆಟ್ರೋ ರೈಲಿನಲ್ಲಿ ಗೋಬಿ ಸವಿದಿದ್ದಾರೆ. ಇದರ ವಿಡಿಯೋವನ್ನು ಸ್ನೇಹಿತರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಈ ನಡುವೆ ನಿಯಮ ಉಲ್ಲಂಘಿಸಿದ ಯೂಟ್ಯೂಬರ್ ಗೆ ನಮ್ಮ ಮೆಟ್ರೋ ರೂ.500 ದಂಡ ವಿಧಿಸಿದೆ. ಅಲ್ಲದೆ, ಸುನೀಲ್ ಹಾಗೂ ಅವರ ಸ್ನೇಹಿತರ ವಿರುದ್ಧ ಸಿಎಆರ್ ದಾಖಲಿಸಲಾಗಿದೆ, ಎಚ್ಚರಿಕೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋವನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು ಅವರ ಬಂಧನಕ್ಕಾಗಿ ಜಯನಗರದಲ್ಲಿ ಕಾಯುತ್ತಿದ್ದರು. ಮೂವರು ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಅರ್ಧ ದಿನ ಮೂವರನ್ನು ಠಾಣೆಯಲ್ಲಿರಿಸಲಾಗಿತ್ತು ಎಂದು ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *