Connect with us

LATEST NEWS

ಕೇರಳದ ಹೆಣ್ಮಕ್ಕಳು ಐಸಿಸ್ ಗೆ ಮಾರಾಟ : ರಾಜ್ಯ ಕರಾವಳಿಗೂ ಇದೆಯಾ ಈ ನಂಟು ?

ಕೇರಳದ ಹೆಣ್ಮಕ್ಕಳು ಐಸಿಸ್ ಗೆ ಮಾರಾಟ :ರಾಜ್ಯ ಕರಾವಳಿಗೂ ಇದೆಯಾ ಈ ನಂಟು ?

ತಿರುವನಂತಪುರಂ. ಜನವರಿ 12: ಕೇರಳ ರಾಜ್ಯಾದ್ಯಂತ ಬೇರು ವಿಸ್ತರಿಸಿಕೊಳ್ಳುತ್ತಿರುವ ಜಗತ್ತಿನಲ್ಲೇ ಅತ್ಯಂತ ಭಯಾನಕ ಸಂಘಟನೆಯಾದ ಐಸಿಸ್ ಉಗ್ರ ಸಂಘಟನೆಗೆ, ಬಲವಂತದಿಂದ ಮತಾಂತರಗೊಳಿಸಿದ ಅನ್ಯಧರ್ಮದ ಹೆಣ್ಮಕ್ಕಳನ್ನು ಮಾರಾಟ ಮಾಡುವ ದಂಧೆ ಬಯಲಾಗಿದೆ.

ಕೊಚ್ಚಿ ಸಮೀಪದ ಉತ್ತರ ಪರವೂರ್​ನಲ್ಲಿ ಇಬ್ಬರನ್ನು ಬಂಧಿಸಿರುವ ಕೇರಳ ಪೋಲಿಸರು ಈ ಷಡ್ಯಂತ್ರವನ್ನು ಭೇದಿಸಿದ್ದಾರೆ.

24 ವರ್ಷದ ಮಹಿಳೆ ನೀಡಿದ ದೂರಿನನ್ವಯ ತನಿಖೆ ನಡೆಸಿದಾಗ ಬಲವಂತದ ಮತಾಂತರ ಹಾಗೂ ಆರೋಪಿಗಳ ಐಸಿಸ್ ಜತೆಗಿನ ನಂಟು ಬಯಲಾಗಿದೆ.

ರೀಯಾಜ್ ಎಂಬಾತ ಈ ದೂರು ನೀಡಿದ ಮಹಿಳೆಯನ್ನು ಮದುವೆಯಾಗಿದ್ದ.

ಮದುವೆಯ ಕೆಲವು ದಿನಗಳ ಬಳಿಕ ಆಕೆಯನ್ನು ಪರವೂರ್​ನಲ್ಲಿನ ಧಾರ್ವಿುಕ ಕೇಂದ್ರಕ್ಕೆ ಸೇರಿಸಿದ್ದ.

ಅಲ್ಲಿ ಆಕೆಗೆ ಹಿಂಸೆ ನೀಡಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾರೆ.

ಆ ಬಳಿಕ ಸಿರಿಯಾದ ಐಸಿಸ್​ಗೆ ಮಾರಾಟ ಮಾಡಲು ಪ್ರಯತ್ನಿಸಿದ್ದನೆಂದು ಧೂರಿನಲ್ಲಿ ಮಹಿಳೆ ಹೇಳಿಕೊಂಡಿದ್ದಾಳೆ.

ಪ್ರಕರಣ ಸಂಬಂಧಿಸಿದಂತೆ ಪರವೂರ್​ನ ಫವಾಜ್ ಜಮಾಲ್ ಮತ್ತು ಮೊಹಮದ್ ಸಿಯಾದ್ ಎಂಬಿಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ರಿಯಾಜ್ ವಿರುದ್ಧ ದೂರು ದಾಖಲಾಗಿದ್ದರೂ ಸದ್ಯ ಆತ  ಸೌದಿಯ ಜೆಡ್ಡಾದಲ್ಲಿ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಮೂಲತಃ  ಕೇರಳ ಕಣ್ಣೂರಿನ ನಿವಾಸಿಯಾಗಿದ್ದ ರಿಯಾಜ್ 2015ರಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ಯುವತಿಯ ಸ್ನೇಹ ಬೆಳೆಸಿಕೊಂಡು ದೇಹ ಸಂಪರ್ಕ ಬೆಳೆಸಿದ್ದ.

ಆ ಬಳಿಕ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹುಡುಗಿಯನ್ನು ಬ್ಲ್ಯಾಕ್ ಮೇಲ್ ಮಾಡಿ 2016ರ ಮೇನಲ್ಲಿ ಕೇರಳಕ್ಕೆ ಕರೆದೊಯ್ದು ಅಲ್ಲಿ ಬಲವಂತದಿಂದ ಮತಾಂತರಿಸಿ ಬಳಿಕ ಮದುವೆಯಾಗಿದ್ದ.

ನಂತರ ಇಸ್ಲಾಂನ ಧಾರ್ವಿುಕ ವಿಧಾನಗಳನ್ನು ಪಾಲಿಸುವಂತೆ ಬಲವಂತವಾಗಿ ಒತ್ತಡ ಹೇರಿ ಹಿಂಸಿಸುತ್ತಿದ್ದರಿಂದ ಬೇಸತ್ತ ಪತ್ನಿ ಮನೆ ಬಿಟ್ಟು  ಓಡಿ ಬಂದಿದ್ದಳು.

ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದ ರಿಯಾಜ್, ಆಕೆಯ ಪಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದ.

ನಂತರ ಆಕೆಯನ್ನು ಪತ್ತೆಹಚ್ಚಿದ್ದ ಪೊಲೀಸರು, ನ್ಯಾಯಾಲಯದ ಆದೇಶದಂತೆ ಪತಿಯ ಜತೆ ಕಳುಹಿಸಿದ್ದರು.

ಬಳಿಕ ಆಕೆಯನ್ನು ಪರವೂರ್ ಧಾರ್ವಿುಕ ಕೇಂದ್ರಕ್ಕೆ ಸೇರಿಸಿ, ಸ್ವಲ್ಪ ಸಮಯದ ನಂತರ ಆಗಸ್ಟ್​ನಲ್ಲಿ ಸೌದಿ ಅರೇಬಿಯಾಗೆ ಕರೆದೊಯ್ದಿದ್ದ.

ಅಲ್ಲಿ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ಐಸಿಸ್ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿದ್ದ.

ಅಕ್ಟೋಬರ್​ನಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಎನ್​ಆರ್​ಐಗಳ ಸಹಾಯದಿಂದ ಕೇರಳಕ್ಕೆ ಮರಳಿದ್ದ ಆಕೆ ಪತಿ ವಿರುದ್ಧ ಡಿಸೆಂಬರ್​ನಲ್ಲಿ ಹೈಕೋರ್ಟ್​ನಲ್ಲಿ ದೂರು ದಾಖಲಿಸಿದ್ದಳು.

ರಿಯಾಜ್ ಪತ್ತೆಗಾಗಿ ಪೊಲೀಸರು ಇಂಟರ್​ಪೋಲ್ ನೆರವು ಪಡೆಯಲು ಸಿದ್ಧತೆ ನಡೆಸಿದ್ದಾರೆ.

ಜತೆಗೆ ಕೊಚ್ಚಿಯಲ್ಲಿ ಬಂಧಿತರಾದವರಿಗೆ ಐಸಿಸ್ ನಂಟಿನ ಬಗ್ಗೆಯೂ ತನಿಖೆ ನಡೆಸಲಿದ್ದಾರೆ.

ಮದ್ರಸಾಗಳಲ್ಲಿ ಜಿಹಾದ್ ಪಾಠ?

ಕೇರಳದ ಬಹುತೇಕ ಮದ್ರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಧರ್ಮಬೋಧನೆಯ ಹೆಸರಿನಲ್ಲಿ ವಹಾಬಿ ಸಿದ್ಧಾಂತ ಮತ್ತು ಖಲೀಫತ್​ನ ಆಶಯ, ವಿಧಾನಗಳನ್ನು ಬೋಧಿಸಲಾಗುತ್ತಿದೆ ಎಂದು ಖಾಸಗಿ ಇಂಗ್ಲಿಷ್ ಸುದ್ದಿವಾಹಿನಿಯೊಂದು ನಡೆಸಿದ ತನಿಖೆಯ ವೇಳೆ ಬಯಲಾಗಿದೆ.

ಖಲೀಫತ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ.

ಅದರ ಬಗ್ಗೆ ನೇರವಾಗಿ ವಿದ್ಯಾರ್ಥಿಗಳಿಗೆ ಹೇಳುವಂತಿಲ್ಲ, ಹಾಗೆ ಹೇಳಿದರೆ ಹಿಂದುಗಳು ನಮ್ಮನ್ನು ಐಸಿಸ್ ಸಹಾನುಭೂತಿ ಉಳ್ಳವರು ಎನ್ನುತ್ತಾರೆ.

ಅದಕ್ಕಾಗಿ ಮದ್ರಸಾಗಳಿಗೆ ಬರುವ ವಿದ್ಯಾರ್ಥಿಗಳಿಗೆ ಖಲೀಫತ್ ಮತ್ತು ವಹಾಬಿ ಸಿದ್ಧಾಂತವನ್ನು ಬೋಧಿಸುತ್ತೇವೆ ಎಂದು ಹಲವು ಮದ್ರಾಸಗಳ ಟ್ರಸ್ಟ್​ನ ಮುಖ್ಯಸ್ಥರು ಟಿವಿ ವಾಹಿನಿಯ ಕುಟುಕು ಕಾರ್ಯಾಚರಣೆಯ ವೇಳೆ ಒಪ್ಪಿಕೊಂಡಿದ್ದಾರೆ.

ಈ ಕಾರ್ಯಕ್ಕೆ ಗಲ್ಪ್ ರಾಷ್ಟ್ರಗಳಿಂದ ನಿರಂತರವಾಗಿ ಹವಾಲ ಜಾಲದ ಮೂಲಕ ಕೋಟ್ಯಂತರ ರೂ. ಹರಿದುಬರುತ್ತದೆ.

ಪ್ರಮುಖವಾಗಿ ಸೌದಿ ಅರೇಬಿಯಾ, ದುಬೈ, ಒಮಾನ್ ಮತ್ತು ಕತಾರ್​ನಿಂದ ಹಣಕಾಸಿನ ನೆರವು ರಹಸ್ಯವಾಗಿ ಮದ್ರಸಾಗೆ ಸೇರುತ್ತದೆ ಎನ್ನಲಾಗಿದೆ.

ಜತೆಗೆ ನಿಷೇಧಿತ ಇಸ್ಲಾಂ ಭಾಷಣಕಾರ ಝಾಕಿರ್ ನಾೖಕ್​ನ ಬೋಧನೆಗಳು, ಭಾಷಣಗಳ ವಿಡಿಯೋ, ಆತನ ಕಾರ್ಯಕ್ರಮಕ್ಕೆ ಬರುವ ಇತರ ಧರ್ಮದವರು ಇಸ್ಲಾಂ ಧರ್ಮ ಸ್ವೀಕರಿಸುವ ವಿಡಿಯೋಗಳನ್ನು ಕೂಡ ಮದ್ರಸಾಗಳಲ್ಲಿ ದಿನವೂ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ರಾಜ್ಯ ಕರಾವಳಿಗೂ ಇದೆಯಾ ಈ ನಂಟು ? 

ಉಗ್ರ ಸಂಘಟನೆ  ಐಸಿಸ್ ಗೇ ಕೇರಳದ ಹುಡುಗಿಯರನ್ನು ಮಾರಾಟ ಮಾಡುವ ಪೈಶಾಚಿಕ ದಂಧೆಗೂ ಕರ್ನಾಟಕದ ಕರಾವಳಿಗೂ ನಂಟೂ ಇದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಕೇರಳ ಗಡಿ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನೇಕ ಹೆಣ್ಮಕ್ಕಳು ಕಳೆದ ನಾಲ್ಕೈದು ವರ್ಷಗಳಿಂದ ನಾಪತ್ತೆಯಾಗಿದ್ದಾರೆ.

ಕರಾವಳಿಯ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ಈ ಭಾಗದಿಂದ ನೂರಾರು ಹೆಣ್ಮಕ್ಕಳು ಕಾಣೆಯಾಗಿದ್ದಾರೆ.

ಸ್ಥಳಿಯ ಪೋಲಿಸರು  ಶ್ರಮವಹಿಸಿ ತನಿಖೆ ನಡೆಸಿದರೂ ಇದುವರೆಗೂ ಈ ಹುಡುಗಿಯರ ಪತ್ತೆ ಸಾಧ್ಯವಾಗಲೇ ಇಲ್ಲ.

ರಾಜ್ಯದ ಕರಾವಳಿ ಭಾಗದಲ್ಲೂ ಐಸಿಸ್ ಉಗ್ರ  ಸಂಘಟನೆಯನ್ನು ಬೆಂಬಲಿಸುವವರು ಬಹು ಸಂಖ್ಯೆಯಲ್ಲಿದ್ದಾರೆ.

ಆದ್ದರಿಂದ ಇವರನ್ನು ಲವ್ ಜಿಹಾದ್ ಮತ್ತಿತರ ಆಮೀಷಗಳಿಂದ ಇಲ್ಲಿಂದ ಬಲವಂತವಾಗಿ ಕೇರಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತಾಂತರಗೊಳಿಸಿ ಐಸಿಸ್ ಉಗ್ರ  ಸಂಘಟನೆಗಳಿಗೆ ಮಾರಾಟ ಮಾಡಿರುವ ಸಾಧ್ಯತೆಗಳಿವೆ.

ಇದು ಅಂತರಾಷ್ಟ್ರೀಯ ವಿಷಯವಾದ್ದರಿಂದ ಸ್ಥಳೀಯ ಪೋಲಿಸರಿಗೆ ಇದನ್ನು ಭೇಧಿಸಲು ಅಸಾಧ್ಯ.

ಆದ್ದರಿಂದ ಇದನ್ನು ಎನ್ ಐಎ  ಮೂಲಕ ತನಿಖೆ ಪಡಿಸಿದರೆ  ಮಾತ್ರ ಇದನ್ನು ಭೇದಿಸಲು ಸಾಧ್ಯ.

ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕಾದ ಅಗತ್ಯವಿದೆ.