Connect with us

    LATEST NEWS

    ಭಜನೆ ಹೆಸರಲ್ಲಿ ಹಿಂದುಳಿದ, ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳನ್ನು ಬೀದಿಗಳಲ್ಲಿ ಕುಣಿಸಲಾಗುತ್ತಿದೆ – ಪ್ರತಿಭಾ ಕುಳಾಯಿ

    ಸುರತ್ಕಲ್ ಅಕ್ಟೋಬರ್ 20: ಭಜನೆ ಹೆಸರಲ್ಲಿ ಹಿಂದುಳಿದ ಪರಿಶಿಷ್ಟ ಪಂಗದ ಹೆಣ್ಣು ಮಕ್ಕಳನ್ನು ಬೀದಿಗಳಲ್ಲಿ ಕುಣಿಸಲಾಗುತ್ತಿದೆ ಎಂದು ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.


    ಶನಿವಾರ ಸುರತ್ಕಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಭಕ್ತಭಾವದಿಂದ ದೇವಸ್ಥಾನಗಳಲ್ಲಿ, ಭಜನಾ ಮಂದಿರಗಳಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಗಳನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಹಿಂದುಳಿದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಾ ಕುಳಾಯಿ ಆರೋಪಿಸಿದರು.

    ಮೇಲ್ಜಾತಿಯ ಹೆಣ್ಣು ಮಕ್ಕಳು ಸಭೆ ಸಮಾರಂಭಗಳ ವೇದಿಕೆಗಳಲ್ಲಿ ಗೌರವಯುತವಾಗಿ ಕುಣಿಯುತ್ತಿದ್ದರೆ, ಹಿಂದುಳಿದ, ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳನ್ನು ಬೀದಿಗಳಲ್ಲಿ ಕುಣಿಸಲಾಗುತ್ತಿದೆ. ಭಜನೆ ಹಿಂದೂ ಧರ್ಮದ ಸಂಸ್ಕೃತಿಯೇ ಆಗಿದ್ದರೂ, ಭಜನೆ ಮಾಡುತ್ತಾ ರಸ್ತೆ, ಬಿದಿಗಳಲ್ಲಿ ಕುಣಿಯವುದು ತಪ್ಪು. ಅದು ಭಾರತೀಯ ಸಂಸ್ಕೃತಿ ಅಲ್ಲ ಎಂದು ಅವರು ಹೇಳಿದರು. ಹಿಂದುತ್ವ ಸಂಘಟನೆಗಳ ಮುಖಂಡರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ರಸ್ತೆ, ಬೀದಿಗಳಲ್ಲಿ ನಡೆಯುವ ಕುಣಿತ ಭಜನೆಗೆ ಕಳುಹಿಸುತ್ತಾರಾ ಎಂದು ಪ್ರಶ್ನಿಸಿದ ಪ್ರತಿಭಾ ಕುಳಾಯಿ, ಈ ಬಗ್ಗೆ ಹೆಣ್ಣು ಮಕ್ಕಳ ಹೆತ್ತವರು ಯೋಚಿಸಬೇಕಿದೆ ಎಂದರು.

    ಹೆಣ್ಣು ಮಕ್ಕಳನ್ನು ಬಳಸಿಕೊಂಡು ರಸ್ತೆ, ಬೀದಿಗಳಲ್ಲಿ ಮಾಡುವ ಭಜನೆಗಳು ಸಮಂಜಸವೇ ಅಥವಾ ಅಸಮಂಜಸವೇ ಎಂಬ ಕುರಿತಾಗಿ ಸ್ವಾಮೀಜಿಗಳು, ಧರ್ಮ ಗುರುಗಳು ಹಾಗೂ ಸ್ವಘೋಷಿತ ಹಿಂದೂ ನಾಯಕರು ಸ್ಪಷ್ಟನೆ ನೀಡಬೇಕು ಒತ್ತಾಯಿಸಿದರು.

    ಇದನ್ನೂ ಓದಿ…

    ಹೆಣ್ಣು ಮಕ್ಕಳಿಂದ ಬೀದಿ ಭಜನೆ: ಪ್ರತಿಭಾ ಕುಳಾಯಿಗೆ ತೀಕ್ಷವಾಗಿ ಪ್ರತಿಕ್ರೀಯಿಸಿದ ಶಾಸಕ ಡಾ. ಭರತ್ ಶೆಟ್ಟಿ..!!

     

    Share Information
    Advertisement
    Click to comment

    You must be logged in to post a comment Login

    Leave a Reply