LATEST NEWS
ಮಂಗಳೂರಿನವಳೆನ್ನಲು ಹಿಂಜರಿಕೆ ಎಂದ ಪ್ರತಿಭಾ ಕುಳಾಯಿಗೆ ತಿರುಗೇಟು ನೀಡಿದ ಯುವತಿ
ಮಂಗಳೂರಿನವಳೆನ್ನಲು ಹಿಂಜರಿಕೆ ಎಂದ ಪ್ರತಿಭಾ ಕುಳಾಯಿಗೆ ತಿರುಗೇಟು ನೀಡಿದ ಯುವತಿ
ಮಂಗಳೂರು ಎಪ್ರಿಲ್ 19: ಜಮ್ಮು ಕಾಶ್ಮೀರದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಹಿನ್ನಲೆಯಲ್ಲಿ ನನಗೆ ನಾನು ಭಾರತೀಯಳು ಎನ್ನಲು ನಾಚಿಕೆಯಾಗುತ್ತದೆ, ಮಂಗಳೂರಿನವಳೆನ್ನಲೂ ನನಗೆ ಹಿಂಜರಿಕೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದ ಮಂಗಳೂರು ಮಹಾನಗರಾಪಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ದ ಸಾಮಾಜಿ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.
ಪ್ರತಿಭಾ ಕುಳಾಯಿ ಹೇಳಿಕೆ ವಿರುದ್ದ ಮಂಗಳೂರಿನ ಯುವತಿಯೊಬ್ಬಳು ಖಂಡಿಸಿ ಹಾಕಿರುವ ವಿಡಿಯೋ ಈ ವೈರಲ್ ಆಗಿದೆ. ನಾನು ಮಂಗಳೂರಿಗಳೆನ್ನಲು ನನಗೆ ಹೆಮ್ಮೆ ಇದೆ. ಸುಮ್ಮನೆ ಯಾವುದೋ ಉದ್ದೇಶದಿಂದ ಕೆಲವರನ್ನು ಇಂಪ್ರೆಸ್ ಮಾಡಲು ಪರ್ಸನಲ್ ಅಜೆಂಡಕ್ಕಾಗಿ ಊರಿನ ಬಗ್ಗೆ ಕೀಳಾಗಿ ಮಾತನಾಡಬೇಡಿ. ಮಂಗಳೂರು ನಿಮ್ಮನ್ನು ಕೂಡ ಬೆಳೆಸಿದೆ ಎಂದು ಯುವತಿ ತಿರುಗೇಟು ನೀಡಿದ್ದಾಳೆ.
ಪ್ರಧಾನಿ ಮೋದಿ ಪತ್ನಿಯ ಬಗ್ಗೆ ಹೇಳಿಕೆ ನೀಡಿರುವ ಪ್ರತಿಭಾ ಕುಳಾಯಿ ವಿರುದ್ದ ಕಿಡಿಕಾರಿದ ಯುವತಿ ನಿಮಗೆ ಪ್ರಧಾನಿಯವರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ದೇಶವಾಳಲು ಮದುವೆಯಾಗಬೇಕು ಎಂದಿಲ್ಲ. ಅವರ ಹೆಂಡತಿ ಮೇಲೆ ದೌರ್ಜನ್ಯವಾಗಿದೆ ಎನ್ನುವ ನಿಮ್ಮಲ್ಲಿ ಈ ಬಗ್ಗೆ ಸಾಕ್ಷಿ ಇದೆಯೇ ಎಂದು ಯುವತಿ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾರೆ.
ನಮ್ಮ ಊರಿನ , ಧರ್ಮದ ಬಗ್ಗೆ ಕೀಳಾಗಿ ಮಾತನಾಡಬೇಡಿ ಎಂದು ಪ್ರತಿಭಾ ಕುಳಾಯಿಗೆ ಮನವಿ ಮಾಡಿದ್ದಾರೆ.
You must be logged in to post a comment Login