ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಯುವತಿಯ ರಕ್ಷಣೆ

ಉಡುಪಿ ಎಪ್ರಿಲ್ 13: ಬೆಕ್ಕನ್ನು ರಕ್ಷಿಸಲು ಬಾವಿಗೆ ಇಳಿದ ಯುವತಿಯೋರ್ವಳು ಮೇಲೆ ಬರಲಾಗದೇ ಬಾವಿಯೊಳಗೆ ಸಿಲುಕಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ದುರ್ಗಾ ಗ್ರಾಮದ ನಾರ್ಕಟ್ ಬಳಿ ಈ ಘಟನೆ ಸಂಭವಿಸಿದ್ದು, ಸ್ಥಳಿಯ ನಿವಾಸಿ ಕೃಪಾ 21 ಕಾಲೇಜು ವಿದ್ಯಾರ್ಥಿನಿ ತನ್ನ ಮನೆಯ ಬೆಕ್ಕು ಬಾವಿಗೆ ಬಿದ್ದಿದ್ದು ಅದನ್ನು ರಕ್ಷಿಸಲು ಬಾವಿಗೆ ಇಳಿದಿದ್ದಳು ನಂತರ ಮೇಲಕ್ಕೆ ಬರಲು ಸಾದ್ಯವಾಗದೇ ಬಾವಿಯಲ್ಲೇ ಸಿಲುಕಿಕೊಂಡಿದ್ದರು.
ಬಾವಿಯಲ್ಲಿ ನೀರಿನ ‌ಪ್ರಮಾಣ ಕಡಿಮೆ ಇದ್ದರಿಂದಿಂದ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿಯವರ ಸಹಾಯದಿಂದ ಅಕೆಯನ್ನು‌ ಮೇಲಕ್ಕೆ ಎತ್ತಿ ಅಕೆಯನ್ನು ರಕ್ಷಿಸಿದ್ದಾರೆ.

Facebook Comments

comments