Connect with us

DAKSHINA KANNADA

ಪ್ರಧಾನಿ ಮೋದಿ ಭೇಟಿ ಹಿನ್ನಲೆ, ಚೌಕೀದಾರ್ ಸಮವಸ್ತ್ರ ಧರಿಸಲಿರುವ ಬಿಜೆಪಿ ಕಾರ್ಯಕರ್ತರು

ಪ್ರಧಾನಿ ಮೋದಿ ಭೇಟಿ ಹಿನ್ನಲೆ, ಚೌಕೀದಾರ್ ಸಮವಸ್ತ್ರ ಧರಿಸಲಿರುವ ಬಿಜೆಪಿ ಕಾರ್ಯಕರ್ತರು

ಮಂಗಳೂರು, ಎಪ್ರಿಲ್ 13 : ಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ.

ಸಂಜೆ ಸುಮಾರು 4.15 ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿರುವ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಘಟಕ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆಗೆ ರಾಜ್ಯದ ಹಲವು ಬಿಜೆಪಿ ಮುಖಂಡರೂ ಸೇರಿಕೊಳ್ಳಲಿದ್ದಾರೆ.

ಪ್ರಧಾನಿ ಮೋದಿಯವರನ್ನು ಕಾಂಗ್ರೇಸ್ ಹಾಗೂ ಇತರ ವಿರೋಧ ಪಕ್ಷಗಳು ಚೌಕೀದಾರ್ ಚೋರ್ ಹೈ ಎನ್ನುವ ಘೋಷಣೆಗಳೊಂದಿಗೆ ಚುಡಾಯಿಸಲೂ ಆರಂಭಿಸಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಮೈ ಭೀ ಚೌಕೀದಾರ್ ಎನ್ನುವ ಅಭಿಯಾನವನ್ನೇ ಆರಂಭಿಸಿದೆ.

ಈ ಅಭಿಯಾನವನ್ನು ಇಂದು ಪ್ರಧಾನಿ ಮೋದಿಯೆದುರು ಇಂದು ವಿಶೇಷ ರೀತಿಯಲ್ಲಿ ಅನಾವರಣಗೊಳಿಸಲು ಬಿಜೆಪಿ ಘಟಕ ಸಿದ್ಧತೆ ಕೈಗೊಂಡಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೂ ಸೇರಿದಂತೆ ಸಾವಿರಕ್ಕೂ ಮಿಕ್ಕಿದ ಬಿಜೆಪಿ ಕಾರ್ಯಕರ್ತರು ಇಂದು ಮೈ ಭೀ ಚೌಕೀದಾರ್ ಎನ್ನುವ ಹೆಸರು ಪಟ್ಟಿಯೊಂದಿಗೆ ಕಾವಲುಗಾರನ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ.

ಈಗಾಗಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತನ್ನ ಚೌಕೀದಾರ್ ಸಮವಸ್ತ್ರದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರೆ, ಇನ್ನು ಕೆಲವರು ಮೋದಿ ರಾಲಿಯಲ್ಲಿ ಸಮವಸ್ತ್ರಗಳನ್ನು ಧರಿಸಿ ಮಿಂಚಲಿದ್ದಾರೆ.

VIDEO

Facebook Comments

comments