LATEST NEWS
ನಾಯಿಗೆ ಕೃಷ್ಣನ ವೇಷ ಹಾಕಿ ಹಿಂದೂ ದೇವರ ಅವಹೇಳನ ಮಾಡಿದ ಯುವತಿ
ಮಂಗಳೂರು ಅಗಸ್ಟ್ 13 : ಒಂದು ಕಡೆ ಮುಸ್ಲಿಂ ಪ್ರವಾದಿ ಪೈಗಂಬರ್ ಅವರನ್ನು ಅವಹೇಳನ ಮಾಡಿದ ವಿಚಾರ ಹಿಂಸೆಯ ಕಿಡಿ ಹಬ್ಬಿಸಿದ್ದರೆ, ಇನ್ನೊಂದು ಕಡೆ ಕೃಷ್ಣ ಜನ್ಮಾಷ್ಟಮಿಯಂದೇ ಯುವತಿಯೊಬ್ಬಳು ತನ್ನ ಮುದ್ದಿನ ನಾಯಿಗೆ ಕೃಷ್ಣ ವೇಷ ಹಾಕಿ ಹಿಂದು ದೇವರನ್ನು ನಿಂದಿಸಿರುವ ಆರೋಪ ಕೇಳಿಬಂದಿದೆ.
ಮಂಗಳೂರು ಮೂಲದ ಜೋಶಿಲ್ ಲೋಬೊ ಎನ್ನುವ ಮಾಡೆಲಿಂಗ್ ಕ್ಷೇತ್ರದಲ್ಲಿರುವ ಯುವತಿ ತನ್ನ ನಾಯಿ ಮರಿಗೆ ಕೃಷ್ಣನ ವೇಷ ಹಾಕಿದ್ದಾಳೆ. ಕೃಷ್ಣ ಜನ್ಮಾಷ್ಟಮಿಯಂದು ಹಿಂದುಗಳೆಲ್ಲ ತಮ್ಮ ಮಕ್ಕಳಿಗೆ ಕೃಷ್ಣ ವೇಷ ಹಾಕಿ, ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದರೆ ಯುವತಿ ಉದ್ದೇಶಪೂರ್ವಕವಾಗೇ ನಾಯಿ ಮರಿಗೆ ಕೃಷ್ಣ ವೇಷ ಹಾಕಿ, ತಲೆಗೆ ನವಿಲಿನ ಗರಿ, ಸೊಂಟಕ್ಕೆ ಕೊಳಲನ್ನು ಸಿಕ್ಕಿಸಿಕೊಂಡಿರುವ ಫೋಟೊಗಳನ್ನು ತನ್ನ ಇನ್ ಸ್ಟಾ ಗ್ರಾಮಿನಲ್ಲಿ ಹಾಕಿದ್ದಾಳೆ.
ಈ ಫೋಟೊಗಳು ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ. ತನ್ನ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜೋಶಿಲ್ ಲೋಬೊ ಪೋಸ್ಟನ್ನು ಡಿಲೀಟ್ ಮಾಡಿದ್ದಾಳೆ.
You must be logged in to post a comment Login