Connect with us

  DAKSHINA KANNADA

  ಅಡ್ಯನಡ್ಕ – ಪ್ರಿಯಕರನ ಮನೆ ಮುಂದೆ ಧರಣಿ ಕೂತ ಯುವತಿ

  ಪುತ್ತೂರು ಫೆಬ್ರವರಿ 07: ಪ್ರಿಯಕರ ಹುಡುಕಿಕೊಂಡು ಅಡ್ಯನಡ್ಕದವರೆಗೆ ಬಂದ ಉತ್ತರ ಭಾರತ ಮೂಲದ ಯುವತಿಯೊಬ್ಬಳು ಪ್ರಿಯಕರ ಮನೆ ಮುಂದೆ ಯುವಕನನ್ನು ತನಗೆ ಒಪ್ಪಿಸುವಂತೆ ಪ್ರತಿಭಟನೆಗೆ ಕೂತ ವಿಚಿತ್ರ ಘಟನೆ ಮಂಗಳವಾರ ನಡೆದಿದೆ.


  ಉತ್ತರ ಭಾರತದ ಜಲಂದರ್ ಮೂಲದ ಯುವತಿ ಬೆಂಗಳೂರಿನ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕಿದ್ದಳು. ಈ ವೇಳೆ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ.ಪ್ರೀತಿಯ ನಾಟಕವಾಡಿ ಒಂದು ಲಕ್ಷ ಕಬಳಿಸಿ ಕೈಕೊಟ್ಟಿದ್ದನೆನ್ನಲಾಗಿದೆ‌. ಇದರಿಂದ ಆಕ್ರೋಶಗೊಂಡ ಯುವತಿ ತಿಂಗಳ ಹಿಂದಷ್ಟೇ ಪ್ರಿಯಕರನ ಹುಡುಕುತ್ತಾ ಅಡ್ಯನಡ್ಕಕ್ಕೆ ಬಂದು ರಂಪಾಟ ನಡೆಸಿದ್ದಳು. ಆ ಸಂದರ್ಭ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯನ್ನು ಸಮಾಧಾನಪಡಿಸಿದ್ದಲ್ಲದೇ ಬೆಂಗಳೂರಲ್ಲಿ ಪೊಲೀಸ್ ಕಂಪ್ಲೈಂಟ್ ಕೊಡುವಂತೆ ಮನವರಿಕೆ ಮಾಡಿ ಕಳುಹಿಸಿದ್ದರು.

  ಇದೀಗ ಮತ್ತೆ ಅದೇ ವಂಚನೆಗೊಳಗಾದ ಪ್ರಿಯತಮೆ ಇಂದು ಮುಸ್ಸಂಜೆ ಅಡ್ಯನಡ್ಕ ದ ವಂಚಕ ಪ್ರಿಯತಮ ಮನೆ ಮುಂದೆ ಪ್ರತ್ಯಕ್ಷಳಾಗಿ ಧರಣಿ ಕುಳಿತಿದ್ದಾಳೆ. ಈ ಬಗ್ಗೆ ಜನ ಜಮಾಯಿಸುತ್ತಿದ್ದಂತೆ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ವಿಟ್ಲ ಠಾಣೆಗೆ ಕರೆತಂದಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply