FILM
ನನ್ನ ಬಿಡುಗಡೆ ಮುಂಬೈ ಪೊಲೀಸರು ₹ 15 ಲಕ್ಷ ಬೇಡಿಕೆ ಇಟ್ಟಿದ್ದರು- ನಟಿ ಗಹನಾ ವಶಿಷ್ಠ್
ಮುಂಬೈ: ₹ 15 ಲಕ್ಷ ನೀಡಿದರೆ ಬಿಡುಗಡೆ ಮಾಡುವುದಾಗಿ ಮುಂಬೈ ಪೊಲೀಸರು ಬೇಡಿಕೆ ಇಟ್ಟಿದ್ದರು ಎಂದು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಗಹನಾ ವಶಿಷ್ಠ್ ಹೇಳಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗಹಾನ ವಶಿಷ್ಠ್ ಅವರನ್ನು ಕಳೆದ ಫೆಬ್ರುವರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.
4 ತಿಂಗಳು ಜೈಲಿನಲ್ಲಿದ್ದ ಅವರನ್ನು ನಂತರ ಬಿಡುಗಡೆ ಮಾಡಲಾಗಿತ್ತು. ನನ್ನ ಬಿಡುಗಡೆ ಮುಂಬೈ ಪೊಲೀಸರು ₹ 15 ಲಕ್ಷ ಬೇಡಿಕೆ ಇಟ್ಟಿದ್ದರು, ನಾನು ಯಾವುದೇ ತಪ್ಪು ಮಾಡಿಲ್ಲ, ಹಣವನ್ನು ಯಾಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದೆ ಎಂದು ಗಹನಾ ವಿಶಷ್ಠ್ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಗಹನಾ ವಶಿಷ್ಠ್ ಹಾಗೂ ಇತರೆ ಮೂವರು ಆರೋಪಿಗಳು ನಡೆಸಿರುವ ವಾಟ್ಸ್‌ಆ್ಯಪ್ ಚಾಟ್‌ನಿಂದ ಈ ಅಂಶ ಬಹಿರಂಗವಾಗಿದೆ ಎಂದು ಇಂಡಿಯಾ ಟುಡೆ ಹೇಳಿದೆ.
ಗಹನಾ ವಶಿಷ್ಠ್ ಗೆಳೆಯರು ₹8 ಲಕ್ಷ ಹೊಂದಿಸಿದ್ದರು. ಆದರೆ ಪೊಲೀಸರು 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ವಾಟ್ಸ್ಆ್ಯಪ್ ಚಾಟ್‌ನಿಂದ ತಿಳಿದು ಬಂದಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಅಪರಾಧ ವಿಭಾಗದ ಪೊಲೀಸರು ಹೊಸದಾಗಿ ಎಫ್‌ಐಆರ್ ದಾಖಲಿಸಿದ್ದು, ಉದ್ಯಮಿ ರಾಜ್ ಕುಂದ್ರಾ ಅವರ ಕಂಪನಿಯ ನಿರ್ಮಾಪಕರು ಮತ್ತು ನಟಿ ಗೆಹನಾ ವಸಿಷ್ಠ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಅಲ್ಲದೆ ಅಶ್ಲೀಲ ಚಲನಚಿತ್ರಗಳ ರಾಕೆಟ್ ಪ್ರಕರಣದಲ್ಲಿ ಮೂರು ಎಫ್‌ಐಆರ್‌ಗಳನ್ನು ಎದುರಿಸುತ್ತಿರುವ ನಟ ಗೆಹನಾ ವಸಿಷ್ಠ್ ಅಲಿಯಾಸ್ ವಂದನಾ ತಿವಾರಿ, ಫೆಬ್ರವರಿಯಲ್ಲಿ ಮುಂಬೈ ಪೋಲಿಸ್ ತನ್ನ ಹೇಳಿಕೆಯಲ್ಲಿ ರಾಜ್ ಕುಂದ್ರಾ ಮತ್ತು ಏಕ್ತಾ ಕಪೂರ್ ಹೆಸರು ಹೇಳುವಂತೆ ಕೇಳಿಕೊಂಡಿದ್ದರು, ಆದರೆ ನಾನು ಅದನ್ನು ನಿರಾಕರಿಸಿದ್ದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.