Connect with us

    DAKSHINA KANNADA

    ಮಂಗಳೂರು ನಗರದ ಕದ್ರಿ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷ : ನಗರವಾಸಿಗಳಲ್ಲಿ ಆತಂಕ..!

    ಮಂಗಳೂರು : ಮಂಗಳೂರು ನಗರದಲ್ಲಿ ಮತ್ತೆ ಕಾಡುಕೋಣ ಪ್ರತ್ಯಕ್ಷವಾಗಿದ್ದು ನಗರವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಮಂಗಳೂರು ನಗರದ ಕದ್ರಿ , ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ರಾತ್ರಿ ಹಗಲು ಸುತ್ತಾಡುತ್ತಿದ್ದು ಸ್ಥಳಿಯ ಜನ ಸಹಜವಾಗಿಯೇ ಆತಂಕ್ಕೀಡಾಗಿದ್ದಾರೆ.

    ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ , ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ. ರಾತ್ರಿ ವೇಳೆ ಕಾಡುಕೋಣಗ ಸಂಚಾರ ಜೋರಾಗಿಯೇ ಇದ್ದು ಸ್ಥಳೀಯ ಸಿಸಿಟಿವಿಯಲ್ಲಿ ಚಲನವಲನ ದಾಖಲಾಗಿದೆ. ಅರಣ್ಯ ಇಲಾಖಾ ಸಿಬಂದಿ ಮತ್ತು ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಾರ್ಯಚರಣೆ ನಡೆಸುತ್ತಿದ್ದಾರೆ.ಇಂದು ಸೋಮವಾರ ಹಗಲಿನಲ್ಲಿ ಸಹ ಕೋಣ ಪರಿಸರದಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದು ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸುವುದರಿಂದ ಅರಣ್ಯ ಇಲಾಖೆ ರಾತ್ರಿಗಾಗಿ ಕಾದು ಕಾರ್ಯಚರಿಸುವುದಾಗಿ ಮಾಹಿತಿ ನೀಡಿದೆ.

    ಸ್ಥಳೀಯ ಮಂಗಳೂರು ನಗರ ಪಾಲಿಕೆಯ ಸದಸ್ಯರಾದ ಮನೋಹರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳಿಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ಕಾಡುಕೋಣಗಳು ಲಗ್ಗೆ ಇಟ್ಟಿದ್ದುವು, ಇದೀಗ ಮೂರನೇ ಮಾಡಿ ನಗರದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply