Connect with us

    LATEST NEWS

    ಗಾಂಜಾ ಲೋಕದ ವೈದ್ಯರಿಗೆ ಗೇಟ್ ಪಾಸ್ ಕೊಟ್ಟ ಆಸ್ಪತ್ರೆ..ವಿಧ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ

    ಮಂಗಳೂರು ಜನವರಿ 20: ರಾಜ್ಯವನ್ನೇ ಬೆಚ್ಚಿಬಿಳಿಸಿದ್ದ ಮಂಗಳೂರು ವೈದ್ಯರು ಹಾಗೂ ವೈದ್ಯಕೀಯ ವಿಧ್ಯಾರ್ಥಿಗಳ ಗಾಂಜಾ ಪ್ರಕರಣದಲ್ಲಿ ಇದೀಗ ಸಂಬಂಧಪಟ್ಟ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳು ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.


    ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಕೊನೆಗೂ ವೈದ್ಯರು ‌ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದೆ. ಈ ಮೂಲಕ ನಮ್ಮ ‌ಸಂಸ್ಥೆ ಡ್ರಗ್ಸ್ ವಿಚಾರದಲ್ಲಿ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ.
    ಡ್ರಗ್ ಕೇಸ್ ನಲ್ಲಿ ಸಿಕ್ಕಿ ಬಿದ್ದ ಇಬ್ಬರು ವೈದ್ಯರುಹಾಗೂ ಏಳು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಗೇಟ್ ಪಾಸ್ ನೀಡಲಾಗಿದೆ. ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿರುವ ಆಸ್ಪತ್ರೆ ಆಡಳಿತ ಮಂಡಳಿ ಸದ್ಯ ಕಠಿಣ ಕ್ರಮ ಕೈಗೊಂಡಿದೆ.

    ಕೆಎಂಸಿ ಮೆಡಿಕಲ್ ಆಫೀಸರ್ ಆಗಿದ್ದ ಕೇರಳ ಮೂಲದ ವೈದ್ಯ ಡಾ.ಸಮೀರ್ ಮತ್ತು ಮೆಡಿಕಲ್ ಸರ್ಜನ್ ಆಗಿದ್ದ ತಮಿಳುನಾಡು ಮೂಲದ ಮಣಿ‌ಮಾರನ್ ಮುತ್ತು(28) ವಜಾ ಮಾಡಲಾಗಿದೆ. ಉಳಿದ ಏಳು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ಗೆ ಕೆಎಂಸಿ ಡೀನ್ ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *