LATEST NEWS
ಆಂದ್ರ ಪ್ರದೇಶ ಅನಿಲ ಸೊರಿಕೆ ರಸ್ತೆಯಲ್ಲಿ 8 ಸಾವು ಇದ್ದಲ್ಲೇ ಕುಸಿದು ಬೀಳುತ್ತಿರುವ ಜನರು
ಆಂದ್ರ ಪ್ರದೇಶ ಅನಿಲ ಸೊರಿಕೆ ರಸ್ತೆಯಲ್ಲಿ 8 ಸಾವು ಇದ್ದಲ್ಲೇ ಕುಸಿದು ಬೀಳುತ್ತಿರುವ ಜನರು
ವಿಶಾಖಪಟ್ಟಣಂ ಮೇ 07: ಕೊರೊನಾ ಲಾಕ್ ಡೌನ್ ನಡುವೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭೀಕರ ಅನಿಲ ದುರಂತ ಸಂಭವಿಸಿದೆ. ಇಲ್ಲಿನ ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ಒಂದು ಮಗು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಅಸ್ವಸ್ಥಗೊಂಡಿದ್ದಾರೆ.
ಅನಿಲ ಸೋರಿಕೆಯಿಂದಾಗಿ ಸುತ್ತಲ ಪ್ರದೇಶದ ಜನರಲ್ಲಿ ಉಸಿರಾಟ ತೊಂದರೆ, ಕಣ್ಣು ಉರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಪೊಲೀಸರು, ಅಗ್ನಿಶಾಮಕ ದಳ, ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
Chemical gas leakage reported at LG Polymers industry in RR Venkatapuram village, #Visakhapatnam. Complained of burning sensation in eyes&breathing difficulties from the people who effected.#VizagGasLeak pic.twitter.com/DmU921u371
— pRinCě….πd (@ExcIle_pRincE) May 7, 2020
ಘಟನೆಯಲ್ಲಿ ಸದ್ಯ 8 ಮಂದಿ ಮೃತಪಟ್ಟಿದ್ದಾರೆ. 70 ಮಂದಿ ಪ್ರಜ್ಞಾಹೀನರಾಗಿದ್ದಾರೆ. 200–500 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಶಾಖಪಟ್ಟಣಂನ ಪೊಲೀಸ್ ಅಧಿಕಾರಿ ಸ್ವರೂಪ್ ರಾಣಿ ತಿಳಿಸಿದ್ದಾರೆ.
Praying for the well being of over 1,000 people fell sick and many faced breathing difficulties after an alleged gas leak from a chemical plant in #Vizag tdy early morning. As per reports,the leakage happened around 3 am at LG Polymers industry at Venkatapuran. #Vizaggasleak. pic.twitter.com/TCjb1ql69g
— Ashoke Pandit (@ashokepandit) May 7, 2020