Connect with us

LATEST NEWS

ಬಟಾಟೆ ಆಯ್ತು ಈಗ ಹೂವಿನಲ್ಲಿ ಚಿನ್ನ ತೆಗೆಯುತ್ತಾರಾ – ಸಂಸದ ನಳಿನ್ ಕುಮಾರ್ ಪ್ರಶ್ನೆ?

ಬಟಾಟೆ ಆಯ್ತು ಈಗ ಹೂವಿನಲ್ಲಿ ಚಿನ್ನ ತೆಗೆಯುತ್ತಾರಾ – ಸಂಸದ ನಳಿನ್ ಕುಮಾರ್ ಪ್ರಶ್ನೆ?

ಮಂಗಳೂರು ಮೇ.07: 50 ಲಕ್ಷ ರೂಪಾಯಿಯಲ್ಲಿ ಹೂವಿನ ಬೆಳೆ ಬೆಳೆಯಲು ಹೋರಟ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯುತ್ತಾರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕೊರೊನಾ ವಿಶೇಷ ಪ್ಯಾಕೇಜ್ ನ್ನ ಟೀಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೂವಿನ ಬೆಳೆಗೆ ಎಕರೆಗೆ ರೈತ ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ. ಒಂದು ಎಕರೆಗೆ ಹೂ ಬೆಳೆಯಲು 50 ಲಕ್ಷ ಖರ್ಚು ಮಾಡುತ್ತಾನೆ ಎಂಬ ಹೇಳಿಕೆ ಇದನ್ನು ನಿರೂಪಿಸುತ್ತದೆ ಎಂದರು. ಸಿದ್ದರಾಮಯ್ಯ ಅವರು ಒಂದು ಏಕರೆಗೆ ಹೂವಿನ ಬೆಳೆಗೆ 50 ಲಕ್ಷ ಎಲ್ಲಿ ಖರ್ಚು ಮಾಡಲಾಗುತ್ತೆ ಎಂಬ ಬಗ್ಗೆ ಅಧ್ಯಯನ ಮಾಡಲಿ, ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ ಎಂದು ಲೆವಡಿ ಮಾಡಿದರು.

ಕೊರೊನಾ ಸಂಕಷ್ಟದ ಈ ಸಂದರ್ಭ ರಾಜಕೀಯ ಮಾಡುವ ಹೇಯ ಕೃತ್ಯ ಸಿದ್ದರಾಮಯ್ಯ ನಡೆಸಿದ್ದಾರೆ. ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ಕಾಲಘಟ್ಟವನ್ನು ಉಪಯೋಗಿಸಿದ್ದು, ಸಿದ್ದರಾಮಯ್ಯರಂತ ಹಿರಿಯರು ಈ ರೀತಿ ಟೀಕೆ ಮಾಡುವುದು ಸರಿಯಲ್ಲ, ಸಿದ್ದರಾಮಯ್ಯ ಸರ್ಕಾರದ ಸಂದರ್ಭ ರೈತರ ಆತ್ಮಹತ್ಯೆ ಆಯ್ತು, ಆ ಸಂದರ್ಭ ರೈತರಿಗೆ,ಕೃಷಿಕರಿಗೆ ಯಾವುದೇ ಯೋಜನೆ ಘೋಷಣೆ ಮಾಡದ ಸಿದ್ದರಾಮಯ್ಯ ಈಗ ಸಿಎಂ ಯಡಿಯೂರಪ್ಪ ಅವರ ಕೊರೊನಾ ಪ್ಯಾಕೇಜ್ ನ್ನು ಟೀಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.