ಅಂಫಾನ್ ಚಂಡಮಾರು ಪ್ರಭಾವ ಪುತ್ತೂರು ಮೆಸ್ಕಾಂ ಗೆ ಬರೊಬ್ಬರಿ 60 ಲಕ್ಷ ನಷ್ಟ

ಮಂಗಳೂರು ಮೇ.06: ಅಂಫಾನ್ ಚಂಡಮಾರುತ ಹಿನ್ನಲೆಯಲ್ಲಿ ನಿನ್ನೆ ಕರಾವಳಿಯಾದ್ಯಂತ ಸುರಿದ ಭಾರೀ ಮಳೆ-ಗಾಳಿಯಿಂದಾಗಿ ಕೃಷಿಗೆ ಭಾರೀ ಹಾನಿಯಾಗಿದೆ.

ಪುತ್ತೂರು ತಾಲೂಕಿನ ಹಲವೆಡೆ ತೊಂದರೆಯಾಗಿದೆ. ಅಲಂಗಾರು‌ ಪರಿಸರದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ತೋಟ ಬಿರುಗಾಳಿಗೆ ಸಂಪೂರ್ಣ ನೆಲಕಚ್ಚಿದ್ದು, ಅಂದಾಜು ನಾಲ್ಕು ಲಕ್ಷ ನಷ್ಟ ಸಂಭವಿಸಿದೆ.

ಭಾರೀ ಮಳೆ-ಗಾಳಿಗೆ ಮೆಸ್ಕಾಂ ವಿಭಾಗಕ್ಕೆ ಅಪಾರ ನಷ್ಟ ಸಂಭವಿಸಿದೆ. ನಿನ್ನೆ ಸಂಜೆ ಬೀಸಿದ್ದ ಬಿರುಗಾಳಿಯಿಂದಾಗಿ ಪುತ್ತೂರು ಮೆಸ್ಕಾಂ ವಿಭಾಗಕ್ಕೆ ಬರೊಬ್ಬರಿ 60 ಲಕ್ಷ ನಷ್ಟಲಾಗಿದ್ದು, ಅಂದಾಜು 380ಕ್ಕೂ ಅಧಿಕ ವಿದ್ಯುತ್ ಕಂಬಗಳು ಸೇರಿದಂತೆ ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ. ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲೂ ಹಾನಿಯಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಅಂಫಾನ್ ಚಂಡಮಾರುತವಾಗಿ ಪರಿವರ್ತಿತವಾದ ಕಾರಣ ಕರಾವಳಿ‌ ಭಾಗದಲ್ಲಿ ಬಿರುಗಾಳಿ‌ ಸಹಿತ ಮಳೆಯಾಗಿದೆ.