Connect with us

    FILM

    ಗರುಡ ಗಮನ ವೃಷಭ ವಾಹನ – ಕೊಲೆ ಹಿನ್ನಲೆ ದೃಶ್ಯದಲ್ಲಿ ಮಹದೇಶ್ವರನ ಹಾಡು ಬಳಕೆಗೆ ಆಕ್ಷೇಪ

    ಬೆಂಗಳೂರು ನವೆಂಬರ್ 30: ಕನ್ನಡ ಚಲನಚಿತ್ರರಂಗದಲ್ಲಿ ಭರ್ಜರಿ ಗೆಲವು ಸಾಧಿಸಿರುವ ರಾಜ್ ಬಿ ಶೆಟ್ಟಿ ನಿರ್ದೇಶನ ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಟ ರಾಜ್‌ ಬಿ.ಶೆಟ್ಟಿ ಅವರು (ಶಿವ) ಕೊಲೆ ಮಾಡಿ ಹುಲಿ ನೃತ್ಯ ಮಾಡುವ ದೃಶ್ಯದ ಹಿನ್ನಲೆಯಲ್ಲಿ ಸೂಜುಗಾದ ಸೂಜಿ ಮಲ್ಲಿಗೆ.. ಎಂಬ ಮಲೆ ಮಹದೇಶ್ವರಸ್ವಾಮಿಯ ಜಾನಪದ ಹಾಡನ್ನು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.


    ಈ ಕುರಿತಂತೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯವರೇ ಆದ ಯುವ ಸಾಹಿತಿ ಸ್ವಾಮಿ ಪೊನ್ನಾಚಿ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಗರುಡ ಗಮನ, ವೃಷಭ ವಾಹನ ಚಿತ್ರ ಯಶಸ್ವಿಯಾಗಲಿ.. ಆದರೆ, ಕೊಲೆ ಮಾಡಿ ಕುಣಿಯೋ ದೃಶ್ಯವೊಂದರಲ್ಲಿ ಆ ದೃಶ್ಯಕ್ಕೆ ಸಂಬಂಧವೇ ಇರದ, ಅಸಹಜವಾಗಿ ಮಹದೇಶ್ವರನ ಹಾಡು ಸೂಜುಗಾದ ಸೂಜಿ ಮಲ್ಲಿಗೆಯನ್ನು ಬಳಸಿಕೊಳ್ಳಲಾಗಿದೆ. ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೇ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ? ಜಾನಪದ ಅಂದ ತಕ್ಷಣ ಏನಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯು ಇರಲಿಲ್ಲವೇ? ಮಾರ್ಕೆಟ್ ಬೇರೆ ರೀತಿಯಲ್ಲೇ ಮಾಡಿಕೊಳ್ಳಬಹುದು. ಹೀಗಲ್ಲ. ಚಿತ್ರ ತಂಡ ಗಮನಿಸಬೇಕು’ ಎಂದು ಅವರು ಬರೆದಿದ್ದಾರೆ.


    ಬರಹಗಾರ್ತಿ ಕುಸುಮಾ ಆಯರಹಳ್ಳಿ ಕೂಡ ತಮ್ಮ ಫೇಸ್‌ಬುಕ್‌ ಪುಟದಲ್ಲಿ, ‘ಕೊಂದು ಕುಣಿಯುವುದಕ್ಕೂ ಮಾದಪ್ಪನ ಸೂಜು ಮಲ್ಲಿಗೆಗೂ ಏನು ಸಂಬಂಧ? ಎಂಬ ಪ್ರಶ್ನೆಗೆ ಉತ್ತರ ಸಿಕ್ತಾ ಇಲ್ವ’ ಎಂದು ಪ್ರಶ್ನಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *