LATEST NEWS
ಮಂಗಳೂರು ಬಂದರಲ್ಲಿ ಭಾರಿ ಪ್ರಮಾಣದ ಗಾಂಜಾ ಪತ್ತೆ

ಮಂಗಳೂರು ಸೆಪ್ಟೆಂಬರ್ 14: ಅಂತರಾಷ್ಟ್ರೀಯ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿದೇಶದಿಂದ ಬಂದ ಕಂಟೇನರ್ ಒಂದರಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾದ ಘಟನೆ ನವಮಂಗಳೂರು ಬಂದರಿನಲ್ಲಿ ನಡೆದಿದೆ.
ಶ್ರೀಲಂಕಾದಿಂದ ಬಂದಿರುವ ಕಂಟೇನರ್ ನಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದ್ದು, ಕೇಂದ್ರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀಲಂಕಾದ ಕೊಲಂಬೋದಿಂದ ಹಡಗಿನ ಮೂಲಕ ಬಂದ ಕಂಟೇನರ್ ಲ್ಲಿ ಇದು ಪತ್ತೆಯಾಗಿದೆ. ಇಂದು ಕಂಟೇನರ್ ಎಸಿ ರಿಪೇರಿಗೆ ತೆರಳಿದ ತಾಂತ್ರಿಕ ಸಿಬ್ಬಂದಿಗಳು ಭಾರಿ ಪ್ರಮಾಣದ ಗಾಂಜಾ ಸಾಗಾಟ ಪತ್ತೆ ಮಾಡಿದ್ದಾರೆ.
ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೇಂದ್ರ ಅಬಕಾರಿ ಇಲಾಖೆಯ ಅಧಿಕಾರಿಗಳು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಗಾಂಜಾ ಸಾಗಾಟದ ಪ್ರಕರಣ ತನಿಖೆ ಆರಂಭಗೊಂಡಿದ್ದು ತನಿಖೆ ಮುಂದುವರೆದಿದೆ.