Connect with us

LATEST NEWS

ಸೂಪರ್‌ ಮಾಡೆಲ್‌, ನಟಿಯಲ್ಲದ ಈ ಬ್ಯೂಟಿ ಈಗ IPS ಅಧಿಕಾರಿ..!

ಉತ್ತರ ಪ್ರದೇಶ : ಭಾರತೀಯ ಪೊಲೀಸ್ ಸೇವೆಯ ಅತ್ಯಂತ ಸುಂದರ ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಕೇಡರ್‌ನ ಆಶ್ನಾ ಚೌಧರಿ(Aashna Chaudhary)

ಹೆಸರೂ ಸೇರ್ಪಡೆಗೊಂಡಿದೆ. ಸೌಂದರ್ಯದಲ್ಲಿ ಆಶ್ನಾ ಕೂಡ ಸೂಪರ್ ಮಾಡೆಲ್‌ , ನಟಿಯರಿಗಿಂತ ಏನು ಕಡಿಮೆಯಿಲ್ಲ. ಆಶ್ನಾ ಚೌಧರಿಯ ಚಿತ್ರಗಳೇ ಸಾಕ್ಷಿ ಹೇಳುತ್ತಿವೆ.

  ಐಪಿಎಸ್ ಅಧಿಕಾರಿಯಾಗಿರುವ ಆಶ್ನಾ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾ ನಿವಾಸಿ. ಆಕೆಯ ತಂದೆ ಡಾ. ಅಜಿತ್ ಚೌಧರಿ ಓರ್ವ ಪ್ರಾಧ್ಯಾಪಕರಾಗಿದ್ದರೆ, ತಾಯಿ ಇಂದು ಸಿಂಗ್ ಗೃಹಿಣಿಯಾಗಿದ್ದಾಳೆ. ತನ್ನ ಮಗಳ ಕನಸನ್ನು ನನಸು ಮಾಡುವಲ್ಲಿ ಮಗಳೊಟ್ಟಿಗೆ ಸಾಕಷ್ಟು ಶ್ರಮಪಟ್ಟಿದ್ದಾರೆ. ಆಶ್ನಾ ಯಾವುದೇ ಕೋಚಿಂಗ್ ಪಡೆಯದೇ ಸ್ವಂತ ಕಲಿಕೆಯಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದಳು.


ಆಶ್ನಾ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದು IPS ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಬಾಲ್ಯದಲ್ಲಿ ಕಂಡ ಕನಸನ್ನು ನನಸು ಮಾಡಲು ಆಶ್ನಾ ಸತತ ಪ್ರಯತ್ನ ಮಾಡಿ ಕೊನೆಗೂ ಯಶ ಕಂಡಿದ್ದಾಳೆ. ಐಪಿಎಸ್ ಅಧಿಕಾರಿಯಾಗುವ ಅವಳ ಹಾದಿಯು ಅನೇಕ ಸವಾಲುಳನ್ನು ಹೊಂದಿದ್ದರು ಧೃಡತೆ ಮತ್ತು ಸಂಕಲ್ಪದಿಂದ ಅವುಗಳನ್ನು ಎದುರಿಸಿ ಇಂದು ಆಶ್ನಾ IPS ಅಧಿಕಾರಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲೂ ಸದಾ ಅಕ್ಟಿವ್ ಇರುವ ಆಶ್ನಾ 107K followers ಹೊಂದಿದ್ದಾರೆ. “ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ. ಸೋಲು ಅಂತ್ಯವಲ್ಲ ಆದರೆ ಯಶಸ್ಸಿನ ಮೆಟ್ಟಿಲು. ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಪ್ರತಿದಿನ ನಿಮ್ಮನ್ನು ಸುಧಾರಿಸಿಕೊಳ್ಳಿ.

 

ನಿಮ್ಮನ್ನು ಮತ್ತು ನಿಮ್ಮ ಸಾಮರ್ಥ್ಯವನ್ನು ನಂಬಿರಿ. ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಶ್ರಮಿಸಿ. ಯಶಸ್ಸು ಖಂಡಿತವಾಗಿಯೂ ನಿಮ್ಮನ್ನು ಹಿಂಬಾಲಿಸುತ್ತದೆ ಎನ್ನುತ್ತಾರೆ ಆಶ್ನಾ ಚೌಧರಿ IPS..

Share Information
Continue Reading
Advertisement
Click to comment

Leave a Reply

Your email address will not be published. Required fields are marked *