Connect with us

LATEST NEWS

4ನೇ ಕ್ಲಾಸ್ ಓದಿದ್ದ ಹುಡುಗ ಕರ್ನಾಟಕದ ಮೋಸ್ಟ್ ವಾಂಟೆಡ್ ಡೆಂಜರಸ್ ನಕ್ಸಲೈಟ್ ಆದ ಕಥೆ

ಉಡುಪಿ ನವೆಂಬರ್ 19: ಮೂರು ರಾಜ್ಯದ ಪೊಲೀರಿಗೆ ಬೇಕಾಗಿದ್ದ ದಿ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಆ್ಯಂಟಿ ನಕ್ಸಲ್ ಫೋರ್ಸ್‌ನ ಗುಂಡೆಟಿಗೆ ಬಲಿಯಾಗಿದ್ದಾನೆ, ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆಯ ಪಿತ್ತ ಬೈಲ್​ ಪ್ರದೇಶದಲ್ಲಿ ನಡೆದ ಎನ್ ಕಂಟರಿನಲ್ಲಿ ಹತನಾಗಿದ್ದಾನೆ.

ಎಎನ್ಎಫ್ SP ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕರ್ನಾಟಕ ಪೊಲೀಸರಿಗೆ ಭಾರಿ ಯಶಸ್ಸನ್ನು ತಂದುಕೊಟ್ಟಿದೆ. ಈತನಿಗಾಗಿ ಕಳೆದ 20 ವರ್ಷಗಳಿಂದ ಪೊಲೀಸ್ ಪಡೆ ಕಾದು ಕುಳಿತಿತ್ತು. ನಕ್ಸಲೈಟ್ ಗಳಲ್ಲ್ಲೇ ಅತ್ಯಂತ ಡೆಡ್ಲಿಯಷ್ಟ್ ನಾಯಕನಾಗಿದ್ದ ವಿಕ್ರಂ ಗೌಡ 4ನೇ ತರಗತಿ ಓದಿದ್ದ. 46 ವರ್ಷದ ವಿಕ್ರಂ ಗೌಡ ಕಬಿನಿ ದಳಂ 2ನೇ ತಂಡ ಮುನ್ನಡೆಸುತ್ತಿದ್ದ.

ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂ ಗೌಡನ ಮೂಲ ಇದೇ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕೂಡ್ಲು ನಾಡ್ವಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ವಿಕ್ರಂ ಗೌಡ ಹೆಗಲ ಮೇಲಿತ್ತು. ಕಳೆದ 20 ವರ್ಷಗಳಿಂದ 61 ಕೇಸ್​ಗಳನ್ನು ಹೊತ್ತುಕೊಂಡಿರುವ ಈ ವಿಕ್ರಂ ಗೌಡ ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ.ಕೇರಳದಲ್ಲೂ ಈತನ ಮೇಲೆ 19 ಕೇಸ್​ಗಳಿವೆ. ಕಾರ್ಮಿಕ ಸಂಘಟನೆಯಿಂದ ಬಂದಿದ್ದ ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ (Kerala Police) ಚಳ್ಳೆಹಣ್ಣು ತಿನ್ನಿಸಿದ್ದ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೆ ವಿಕ್ರಂ ಗೌಡ ತೀವ್ರ ವಿರೋಧ ಹೊಂದಿದ್ದ. ಅಷ್ಟೇ ಅಲ್ಲದೇ ಈ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರಗಳನ್ನೂ ಕೂಡ ಅಂಟಿಸಿ, ಗ್ರಾಮ ಗ್ರಾಮಗಳಲ್ಲಿ ಹಂಚಿದ್ದ.

ನಕ್ಸಲ್ ನಾಯಕ ಸಾಕೇತ್ ರಾಜನ್ ಗರಡಿಯಲ್ಲಿ ವಿಕ್ರಮ್ ಗೌಡ ಪಳಗಿದ್ದ. ಸಾಕೇತ್ ರಾಜನ್ ಕಾಲದಲ್ಲಿ ನಕ್ಸಲ್ ಚಟುವಟಿಕೆಗಳು ರಾಜ್ಯದಲ್ಲಿ ಉತ್ತುಂಗದಲ್ಲಿದ್ದವು. 2005 ಫೆಬ್ರವರಿ 5ರಂದು ಮೆಣಸಿನ ಹಾಡ್ಯದಲ್ಲಿ ಸಾಕೇತ್​ ರಾಜನ್​ನನ್ನು ಎನ್​ಕೌಂಟರ್ ಮಾಡಲಾಯಿತು. ಸಾಕೇತ್ ರಾಜನ್ ಜೊತೆಯಿದ್ದ ವಿಕ್ರಮ್ ಗೌಡ ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದ. ತೆರೆಮರೆಯಲ್ಲೆ ಇದ್ದೇ ವಿಕ್ರಂಗೌಡ ನಕ್ಸಲ್​​​ ತಂಡವನ್ನು ಮುನ್ನಡೆಸ್ತಿದ್ದ ಮತ್ತು ತನ್ನ ನಾಯಕನ ಸಾವಿಗೆ ರಿವೇಂಜ್ ತೀರಿಸುವ ಸಲುವಾಗಿ ಹೊಂಚು ಹಾಕಿದ್ದ.


2016ರಲ್ಲಿ ಕೇರಳದ ನೀಲಾಂಬುರ್‌ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ನಕ್ಸಲ್‌ ನಿಗ್ರಹ ಪಡೆಯೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು. ಆಗಲೂ ​ವಿಕ್ರಂ ಗೌಡ ಅಲ್ಲೇ ಇದ್ರೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಕೇರಳದಲ್ಲಿ ಇತ್ತಿಚೆಗೆ ನಕ್ಸಲ್ ಚಟುವಟಿಕೆಗಳ ಮೇಲೆ ಅಲ್ಲಿನ ಸರ್ಕಾರ , ಪೊಲೀಸ್ ಇಲಾಖೆ ಮುಗಿ ಬಿದ್ದಿದ್ದು ನಕ್ಸಲರಿಗೆ ಅಲ್ಲಿ ಉಳಿದು ಕೊಳ್ಳುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನಲೆಯಲ್ಲಿ ನಕ್ಸಲರು ಕರ್ನಾಟಕದತ್ತ ಮುಖ ಮಾಡಿದ್ದರು. ವಿಕ್ರಂಗೌಡ ಕೂಡ ಕರ್ನಾಟಕಕ್ಕೆ ಆಗಮಿಸಿದ್ದ ಇದೇ ವೇಳೆ ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಕಸ್ತೂರಿ ರಂಗನ್‌ ವರದಿ ಜಾರಿ ವಿಷಯಗಳು ಮುನ್ನಲೆಗೆ ಬಂದಿದ್ದು ಮತ್ತೆ ನಕ್ಸಲರು ಈ ಭಾಗದಲ್ಲಿ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದರು.

 

ಪಶ್ಚಿಮ ಘಟ್ಟ ಪ್ರದೇಶವಾದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲ್ ಓಡಾಟ ಹೆಚ್ಚಾಗ ತೊಡಗಿತು. ರಾಜ್ಯ ಗುಪ್ಪಚರ ಮಾಹಿತಿ ಆಧಾರಿಸಿದ ಗೃಹ ಇಲಾಖೆ ಸದ್ದಿಲ್ಲದೆ ಈ ಭಾಗದಲ್ಲಿ ನಕ್ಸಲರ ವಿರುದ್ದ ಕಾರ್ಯಾಚರಣೆ ಆರಂಭಿದ್ದರು. ನಕ್ಸಲರು ಓಡಾಟುವ ಗ್ರಾಮ ಗ್ರಾಮಗಳಿಗೆ ಗುಪ್ತಚರ ದಳವರು ತೆರಳಿ ಮಾಹಿತಿ ಕಲೆ ಹಾಕಿ ಹೊಂಚು ಹಾಕಿ ಕೂತರು. ಅಂತರಿಕ ವಿಭಾಗದ ಡಿಜಿಪಿ ಗಣಮೋಹನ್ ಕೂಡ ಆಗಮಿಸಿ ಎನ್‌ಎನ್‌ಎಫ್‌ ತಂಡದೊಂದಿಗೆ ಇದ್ದು ಮಾರ್ಗದರ್ಶನ ನೀಡಿದ್ದರು. ನವೆಂಬರ್ 10 ಬಳಿಕ ವಿಕ್ರಂ ಗೌಡನ ಇರುವಿಕೆ ಸಾಬೀತಾದ ಬಳಿಕ ಕಾರ್ಯಾಚರಣೆ ತೀವ್ರಗೊಂಡು ನವೆಂಬ್ 18 ರ ಸೋಮವಾರ ಕೊನೆಗೂ ವಿಕ್ರಂ ಗೌಡ ಎಎನ್‌ಎಫ್‌ ಗುಂಡಿಗೆ ಬಲಿಯಾಗಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *