LATEST NEWS
ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.ಕಿಲ್ಲೆ ಮಹಾದ್ವಾರಕ್ಕೆ ಗುದ್ದಲಿ ಪೂಜೆ….

ಪುತ್ತೂರು ಅಕ್ಟೋಬರ್ 14: ಸ್ವಾತಂತ್ರ್ಯ ಹೋರಾಟಗಾರ ,ದೇಶಭಕ್ತ ಎನ್.ಎಸ್.ಕಿಲ್ಲೆ ಯವರ ಸವಿನೆನಪಿಗಾಗಿ ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಎನ್.ಎಸ್.ಕಿಲ್ಲೆ ಮಹಾದ್ವಾರವನ್ನು ನಿರ್ಮಿಸಲು ಕಿಲ್ಲೆ ಪ್ರತಿಷ್ಠಾನ ಮುಂದಾಗಿದ್ದು, ಮಹಾದ್ವಾರದ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಹಾದ್ವಾರದ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ದೇಶ ಇಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಹಿನ್ನಲೆಯಲ್ಲಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗು ದೇಶಭಕ್ತರನ್ನು ನೆನಪಿಸುವ ಕಾರ್ಯ ಮಾಡುತ್ತಿದ್ದಾರೆ.

ಇದೇ ರೀತಿ ಎನ್.ಎಸ್.ಕಿಲ್ಲೆ ಪ್ರತಿಷ್ಠಾನ ಪುತ್ತೂರಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್. ಕಿಲ್ಲೆ ಹೆಸರಿನಲ್ಲಿ ಕಿಲ್ಲೆ ಮೈದಾನಕ್ಕೆ ದ್ವಾರವನ್ನು ನಿರ್ಮಿಸುವ ಮೂಲಕ ದೇಶಭಕ್ತರನ್ನು ಜನರಿಗೆ ಪರಿಚಯಿಸುವ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಈ ದ್ವಾರಕ್ಕೆ ಅಂದಾಜು 12 ಲಕ್ಷ ರೂಪಾಯಿಗಳು ಖರ್ಚಾಗಲಿದ್ದು, ಮುಂದಿನ ಜನವರಿಯಲ್ಲಿ ಈ ಮಹಾದ್ವಾರದ ಕಾಮಗಾರಿಗಳು ಮುಕ್ತಾಯಹೊಂಡು ಸಾರ್ವಜನಿಕರಿಗೆ ತೆರೆಯಲಿದೆ ಎಂದರು.