Connect with us

LATEST NEWS

ಹಸಿದವನಿಗೆ ಉಚಿತ ಅಹಾರ-ಬಟ್ಟೆಬರೆ:ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಿನೂತನ ಕಾರ್ಯಕ್ರಮ ಅಕ್ಷಯ ಧಾಮ ಲೋಕಾರ್ಪಣೆ

ಹಸಿದವನಿಗೆ ಉಚಿತ ಅಹಾರ-ಬಟ್ಟೆಬರೆ.ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಿನೂತನ ಕಾರ್ಯಕ್ರಮ ಅಕ್ಷಯ ಧಾಮ ಲೋಕಾರ್ಪಣೆ

ಮಂಗಳೂರು,ಎಪ್ರಿಲ್ 01 : ಹಸಿದ ಬಡವರಿಗೆ ಉಚಿತ ಆಹಾರ ಮತ್ತು ಬಟ್ಟೆಗಳನ್ನು ಒದಗಿಸುವ ಮಂಗಳೂರು ಧರ್ಮ ಪ್ರಾಂತ ಅಕ್ಷಯ ಧಾಮ ನಗರದ ಬಿಷಪ್ ಹೌಸ್ ನಲ್ಲಿ ಇಂದು ಲೋಕಾರ್ಪಣೆಗೊಂಡಿದೆ.

ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಅಲೋಸಿಯಸ್ ಪಾವ್ಲ್ ಡಿಸೋಜ ಅವರು ಅಕ್ಷಯ ಧಾಮವನ್ನು ಆಶೀರ್ವದಿಸಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಷಪ್  ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬದ ಪ್ರಯುಕ್ತ ಈ ಕೊಡುಗೆಯನ್ನು ಮಂಗಳೂರಿನ ಜನತೆ ನೀಡಲಾಗಿದೆ.

ಹಸಿದವ ಖಾಲಿ ಹೊಟ್ಟೆಯಲ್ಲಿ ಇರಬಾರದು ಎನ್ನುವ ಆಶಯದೊಂದಿಗೆ ಈ ಸೌಲಭ್ಯವನ್ನು ಬಿಷಪ್ ಹೌಸಿನಲ್ಲಿ ಆರಂಭಿಸಲಾಗಿದೆ.

ಇದು ಸಂಪೂರ್ಣವಾಗಿ ಉಚಿತ ಸೇವೆಯಾಗಿದೆ. ಹಸಿವು ಉಳ್ಳ  ಯಾರೂ ಕೂಡ ಇಲ್ಲಿಗೆ ಬಂದು ಇಲ್ಲಿನ ಫ್ರಿಜ್ಜ್ ನಲ್ಲಿಟ್ಟ ಇದ್ದ ಹಣ್ಣು ಹಂಪಲುಗಳನ್ನು, ಅತವಾ ಇತರ  ಆಹಾರ ಪದಾರ್ಥಗಳನ್ನು ತೆಗೆದುಕೊಂಡು ತಿನ್ನಬಹುದು.

ಅಥವಾ ತಮಗೆ ಅಗತ್ಯ ಬೇಕಾಗಿರುವ ಬಟ್ಟೆಗಳನ್ನು ಕೂಡ ಇಲ್ಲಿಂದ ಪಡೆದು ಕೊಂಡು ಹೋಗಬಹುದು.

ಅಗತ್ಯವಿರುವ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಅವರು ಮನವಿ ಮಾಡಿದ ಬಿಷಪ್ ಈ ಒಳ್ಳೆಯ ಕಾರ್ಯದಲ್ಲಿ ದಾನಿಗಳ ಸಹಕಾರವನ್ನೂ ಕೋರಿದರು.

‌ಅನ್ನದಾನ ಮಾಡಲು ಬಯಸುವವರು ಅಥವಾ ಹಣ್ಣು ಹಂಪಲು, ತಿಂಡಿ ತಿನಿಸುಗಳನ್ನು ನೀಡ ಬಯಸುವವರು ಇಲ್ಲಿ ನೀಡಬಹುದಾಗಿದೆ.

ಈಗಾಗಲೇ ಸಾರ್ವಜನಿಕರಿಗಾಗಿ ಇಲ್ಲಿನ ಆವರಣದಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಹಲ ವರ್ಷಗಳಿಂದ ಮಾಡಲಾಗಿದ್ದು, ದಿನಿತ್ಯ ಅನೇಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *