LATEST NEWS
ಮೊಬೈಲ್ ಗೆ ಈ ಮೆಸೇಜ್ ಬಂದರೆ ಹುಷಾರ್

ಮೊಬೈಲ್ ಗೆ ಈ ಮೆಸೇಜ್ ಬಂದರೆ ಹುಷಾರ್
ಮಂಗಳೂರು ನವೆಂಬರ್ 23: ಬ್ಯಾಂಕ್ ಹೆಸರಿನಲ್ಲಿ ಮೆಸೇಜ್ ಕಳುಹಿಸಿ ಆನ್ ಲೈನ್ ಮೂಲಕ ಎಟಿಎಂ ಕಾರ್ಡ್ ಹಾಗೂ ವಿವರ ಸಂಗ್ರಹಿಸಿ ಹಣ ಲಪಟಾಯಿಸುವ ಜಾಲ ಸಕ್ರಿಯವಾಗಿದ್ದು, ಮೊಬೈಲ್ ಗೆ ಈ ರೀತಿಯ ಮೆಸೇಜ್ ಬಂದಾಗ ಮಾಹಿತಿ ನೀಡುವ ಮೊದಲು ಎಚ್ಚರಿಕೆ ವಹಿಸಬೇಕಾಗಿದೆ.
ನಿಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ನಮ್ಮ ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿಲ್ಲ. ವಿವರವನ್ನು ಅಪ್‌ಡೇಟ್ ಮಾಡುವಂತೆ ತಿಳಿಸಿ ಲಿಂಕ್ ಇರುವ ಸಂದೇಶ ಈಗ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಕಾರ್ಡ್ ನಂಬರ್, ಸಿವಿವಿ ನಂಬರ್, ಹುಟ್ಟಿದ ದಿನಾಂಕ ದಾಖಲಿಸುವಂತೆ ಹೇಳುತ್ತದೆ. ಒಂದು ವೇಳೆ ಇದು ನಿಜ ಎಂದು ನಂಬಿ ನೀವು ಮಾಹಿತಿ ಅಪ್‌ಲೋಡ್ ಮಾಡಿದರೆ ನಿಮ್ಮ ಖಾತೆಯಿಂದ ಕ್ಷಣ ಮಾತ್ರದಲ್ಲಿ ಹಣ ಖಾಲಿಯಾಗುವುದು ಖಚಿತ.

ವಂಚಕರು ಈ ಹಿಂದೆ ಕರೆ ಮಾಡಿ ಎಟಿಎಂ ಕಾರ್ಡ್ ಮಾಹಿತಿ ಪಡೆದು ಹಣ ಡ್ರಾ ಮಾಡುತ್ತಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರಿದು ಆನ್‌ಲೈನ್ ಮೂಲಕವೇ ವಂಚನೆ ಮಾಡಲು ತಂತ್ರ ರೂಪಿಸಿದ್ದಾರೆ. ಬ್ಯಾಂಕ್‌ಗಳು ಇಂತಹ ಮಾಹಿತಿ ಗ್ರಾಹಕರಿಂದ ಸಂಗ್ರಹಿಸುವುದಿಲ್ಲ. ಸಾರ್ವಜನಿಕರು ಇಂತಹ ವಂಚನಾ ಜಾಲದ ಬಗ್ಗೆ ಎಚ್ಚರ ವಹಿಸದಿದ್ದರೆ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.