Connect with us

    MANGALORE

    ನೇತ್ರಾವತಿ ನದಿಯಿಂದ ಕಣ್ಣೂರು ತನಕ ನಾಲ್ಕು ಪಥ ರಸ್ತೆ : ಶಾಸಕ ಜೆ.ಆರ್. ಲೋಬೊ

    ನೇತ್ರಾವತಿಯಿಂದ ಕಣ್ಣೂರು ತನಕ ನಾಲ್ಕು ಪಥ ರಸ್ತೆ : ಶಾಸಕ ಜೆ.ಆರ್. ಲೋಬೊ

    ಮಂಗಳೂರು ಅಕ್ಟೋಬರ್ 3: ನೇತ್ರಾವತಿ ನದಿಯಿಂದ ಕಣ್ಣೂರು ತನಕ ನಾಲ್ಕು ಪಥ ರಸ್ತೆ ನಿರ್ಮಾಣ , ಆ ರಸ್ತೆಯಲ್ಲಿ ಜಾಗಿಂಗ್ ಸೈಕಲಿಂಗ್ ಕೂಡಾ ಮಾಡಲು ಅನುಕೂಲವಾಗುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳಿಗೆ ಶಾಸಕ ಜೆ.ಆರ್. ಲೋಬೊ ಅವರು ಮಾಹಿತಿ ನೀಡಿದರು.

    6 ಕಿ.ಮೀ ಉದ್ದದ ರಸ್ತೆಯಿದಾಗಿದ್ದು ಸುಮಾರು 300 ಎಕ್ರೆ ಪ್ರದೇಶ ಅಂದಾಜಿದೆ. ಇದಕ್ಕೆ ಸರ್ವೆ ಮಾಡಲು ರಾಜ್ಯ ಸರ್ಕಾರ 25 ಲಕ್ಷ ಬಿಡುಗಡೆ ಮಾಡಿದ್ದು ಇದು ಕಾರ್ಯಗತವಾದರೆ ಮಹತ್ವದ ಯೋಜನೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು. ಇದನ್ನು ಮೂಡಾದ ಮೂಲಕ ಟೌನ್ ಫ್ಲಾನಿಂಗ್ ಯೋಜನೆಯ ರೀತಿ ಮಾಡಬೇಕು. ಇದರೊಂದಿಗೆ ನೇತ್ರಾವತಿ ನದಿ, ಮಂಗಳೂರು ಹಳೆ ಬಂದರು ಮೂಲಕ ಸುಲ್ತಾನ್ ಬತ್ತೇರಿಯಲ್ಲಿ ಸೇತುವೆ ನಿರ್ಮಿಸಿ ಮುಂದೆ ಇದನ್ನು ನವ ಮಂಗಳೂರು ಬಂದರಿಗೆ ಜೋಡಿಸುವ ಸಾಗಾರ್ ಮಾಲ ರಸ್ತೆಯನ್ನು ಮಾಡಲು ಉದ್ದೇಶಿಸಿದೆ. ಅಲ್ಲದೆ ಕೂಳೂರು ಬಳಿ ಅಂತರ್ ರಾಷ್ಟ್ರೀಯ ಕ್ರೀಡಾ ವಿಲೇಜ್ ನಿರ್ಮಿಸಿ ಅದರಲ್ಲಿ ಎಲ್ಲಾ ರೀತಿಯ ಕ್ರೀಡೆಗಳನ್ನೂ ಆಡಲು ಅನುಕೂಲವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಮಾಹಿತಿ ನೀಡಿದರು.

    ಅಶೋಕ್ ಭಟ್ ಮತ್ತು ನೆಲ್ಸನ್ ಅವರನ್ನು ಜೆ.ಆರ್.ಲೋಬೊ ಅವರು ಈ ಯೋಜನೆಯನ್ನು ವೀಕ್ಷಣೆ ಮಾಡಲು ದೋಣಿಯಲ್ಲಿ ಕಳುಹಿಸಿದರು. ಈಗಾಗಲೇ ಈ ಯೋಜನೆಯ ಬಗ್ಗೆ ಅಗತ್ಯವಾದ ಸರ್ವೇ ಕಾರ್ಯ ಮುಗಿದಿದ್ದು ಹೆಚ್ಚಿನ ಸರ್ವೇ ಕೆಲಸವನ್ನು ಒಂದು ತಿಂಗಳಲ್ಲಿ ಮುಗಿಸುವಂತೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply