Connect with us

KARNATAKA

ಒಮನ್ ನಲ್ಲಿ ಭೀಕರ ಕಾರು – ಟ್ರಕ್ ಅಪಘಾತ, ಬೆಳಗಾವಿ ಮೂಲದ ನಾಲ್ವರು ಸಜೀವ ದಹನ..!

ಬೆಳಗಾವಿ: ಓಮಾನ್‌ ದೇಶದ ಹೈಮಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೆಳಗಾವಿ ಗೋಕಾಕ್ ನ  ನಾಲ್ವರು ದಾರುಣ ಅಂತ್ಯ ಕಂಡಿದ್ದಾರೆ.

ಸಲಾಲಾದಿಂದ ಮುಸ್ಕತ್‌ ಗೆ  ರಜೆ ಪ್ರಯುಕ್ತ ತೆರಳುತ್ತಿದ್ದ ವೇಳೆ ಹೈಮಾ ಪ್ರದೇಶದ ಹತ್ತಿರ ಈ ದುರಂತ ನಡೆದಿದೆ.  ಕುಟುಂಬ ಸದಸ್ಯರು ಸಂಚರಿಸುತ್ತಿದ್ದ  ಕಾರು ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದ್ದು ಈ ಸಂದರ್ಭ ಕಾರಿಗೆ ಬೆಂಕಿ ಹತ್ತಿಕೊಂಡು ನಾಲ್ವರು ಜೀವಂತ ಸುಟ್ಟು ಹೋಗಿದ್ದಾರೆ. ಗೋಕಾಕ್ ನಗರದ ನಿವಾಸಿಗಳಾದ ಪವನ್‌ ಕುಮಾರ್ ಮಾಯಪ್ಪ ತಹಶೀಲ್ದಾರ, ಪೂಜಾ ಮಾಯಪ್ಪ ತಹಶೀಲ್ದಾರ, ವಿಜಯಾ ಮಾಯಪ್ಪ ತಹಶೀಲ್ದಾರ ಮತ್ತು ಅಳಿಯ ಅದಿಶೇಷ ಬಸವರಾಜ ಮೃತ ದುರ್ದೈವಿಗಳಾಗಿದ್ದಾರೆ. ಅವರ ಶವವನ್ನು ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ದುರಂತದ ಮಾಹಿತಿ ಬಂದ ಬಳಿಕ  ರಾಜ್ಯಸಭಾ ಸದಸ್ಯ ಇರಣ್ಣ ಕಡಡಿ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕಂಡು ಮೃತ ದೇಹಗಳನ್ನು ಭಾರತಕ್ಕೆ ಮರಳಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹೃದಯವಿದ್ರಾವಕ ಘಟನೆಯು ಗೋಕಾಕ್ ಸಮುದಾಯದಲ್ಲಿ ಆಘಾತವನ್ನು ಉಂಟುಮಾಡಿದೆ. ಸ್ನೇಹಿತರು ಮತ್ತು ಸಂಬಂಧಿಕರು ಅಂತಹ ಭಯಾನಕ ರೀತಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಅವಶೇಷಗಳನ್ನು ಭಾರತಕ್ಕೆ ಅತ್ಯಂತ ಶೀಘ್ರವಾಗಿ ತರಲು ಪ್ರಯತ್ನಿಸುತ್ತಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *