Connect with us

LATEST NEWS

ಕಟಪಾಡಿ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದವನ ಗತಿ ಏನಾಯಿತು ಗೊತ್ತೇ ?

ಕಟಪಾಡಿ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದವನ ಗತಿ ಏನಾಯಿತು ಗೊತ್ತೇ ?

ಉಡುಪಿ ಮೇ 27:ತುಳುನಾಡಿನ ದೈವಗಳ ಕಾರಣಿಕಗಳು ಕೇವಲ ಕಟ್ಟುಕತೆಯಲ್ಲದೆ ಇಂದಿಗೂ ನಡೆಯುತ್ತಿದೆ ಎನ್ನುವುದಕ್ಕೆ ಜೀವಂತ ಉದಾಹರಣೆಗಳಿವೆ. ಶುಕ್ರವಾರ ಕಟಪಾಡಿಯ ಪೇಟಗುಡ್ಡೆ ಬಬ್ಬು ಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನದಲ್ಲಿ ನಡೆದ ದರ್ಶನ ಸೇವೆಯೂ ಇದಕ್ಕೆ ಸಾಕ್ಷಿಯೊದಗಿಸಿದೆ.

ಕೆಲ ತಿಂಗಳ ಹಿಂದೆ ಸ್ಥಳೀಯ ಕಾಲೇಜಿನ 7 ವಿಧ್ಯಾರ್ಥಿಗಳು ಕೊರಗಜ್ಜ ದೈವಸ್ಥಾನದ ಹುಂಡಿಯ ಹಣ ಕದ್ದಿದ್ದರು. ಈ ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದ ಅನ್ಯಕೋಮಿನ ಯುವಕರ ಗುಂಪು ದೈವದ ಲೀಲೆ ಅರಿಯದೆ ಅಸಂಬದ್ದ ವರ್ತನೆ ತೋರಿತ್ತು. ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಕಾಂಡಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿ ಕಣ್ಮರೆಯಾಗಿತ್ತು. ಈ ಮೂಲಕ ದೈವದ ಅಸ್ಥಿತ್ವವನ್ನೆ ಪ್ರಶ್ನಿಸಲು ಮುಂದಾಗಿದ್ದರು.

ಆದರೆ ದೈವದ ಲೀಲೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಈ ಅನಾಗರಿಕ ವರ್ತನೇ ತೋರಿದ ಕೆಲವೇ ದಿನಗಳಲ್ಲಿ ತಂಡದಲ್ಲಿದ್ದ ಅಪ್ರಾಪ್ತ ಬಾಲಕನೊಬ್ಬನ ದೇಹ ಸ್ಥಿತಿಯಲ್ಲಿ ಗಂಭೀರ ಪರಿಣಾಮ ಗಳು ಕಂಡು ಬಂತು. ಆತನ ಸೊಂಟದ ಕೆಳಗೆ ಅಂದರೆ ಕಾಲಿನ ಭಾಗ ಬಲ ಕಳೆದುಕೊಂಡಿತು. ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿಲ್ಲ . ಅನ್ಯ ಕೋಮಿನವರಾದರೂ ಹಿಂದೂಗಳೊಂದಿಗೆ ಉತ್ತಮ ಒಡನಾಟವಿದ್ದ ಸಂತ್ರಸ್ಥ ಕುಟುಂಬ ಜ್ಯೋತಿಷಿಯ ಮೊರೆ ಹೋಗುತ್ತಾರೆ. ಆಗ ಕೊರಗಜ್ಜನಿಗೆ ಮಾಡಿದ ಅಪಚಾರದ ಪ್ರಸ್ತಾಪವಾಗುತ್ತೆ.

ಅವರ ಸೂಚನೆಯಂತೆ ತಕ್ಷಣವೇ ಕಟಪಾಡಿಯ ಕೊರಗಜ್ಜ ಸ್ಥಾನಕ್ಕೆ ಬಂದು ನೊಂದ ಕುಟುಂಬ ವಿಷಯ ತಿಳಿಸುತ್ತಾರೆ. ಈ ನಡುವೆ ಕಾಣಿಕೆ ಡಬ್ಬಿ ತೆರೆದು ನೋಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಕಿಡಿಗೇಡಿಗಳ ಕೃತ್ಯ ಅರಿವಿಗೆ ಬಂದಿರುತ್ತೆ. ಕೊನೆಗೆ‌ ಕುಟುಂಬದ ಕೋರಿಕೆಯಂತೆ ಕೊರಗಜ್ಜ ದರ್ಶನ ಏರ್ಪಾಟು‌ ಮಾಡಲಾಗುತ್ತೆ. ಅಪಚಾರ ಮಾಡಿದ ಅಪ್ರಾಪ್ತ ಬಾಲಕ ದೈವದ ಕ್ಷಮೆ ಕೊರಿದ್ದಾನೆ. ಇಂತಹಾ ಕೃತ್ಯ ಮಾಡಕೂಡದು ಎಂದು ದೈವ ಎಚ್ಚರಿಸಿದೆ. ಈ ಘಟನೆ ಕರಾವಳಿಯಾದ್ಯಂತ ಕುತೂಹಲ ಕೆರಳಿಸಿದೆ.

ಅಲ್ಲದೆ ಈ ತಂಡದಲ್ಲಿ ಹಿಂದೂ ಧರ್ಮದ ಹುಡುಗನು ಕಿಡ್ನಿವೈಫಲ್ಯದಿಂದ ಬಳಲುತ್ತಿದ್ದಾನೆ. ಈ ಕುಟುಂಬ ಈಗಾಗಲೇ ದೈವಸ್ಥಾನವನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *