Connect with us

BELTHANGADI

ಬೆಳ್ತಂಗಡಿ – ಗುರಂಗಾನದಲ್ಲಿ 5 ಏಕರೆ ಗುಡ್ಡಕ್ಕೆ ಬೆಂಕಿ….!!

Share Information

ಬೆಳ್ತಂಗಡಿ ಫೆಬ್ರವರಿ 26: ಬೆಸಿಗೆ ಕಾಲದ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಾಗುತಿದ್ದು, ಬಿಸಿಲಿನ ಜೊತೆ ಕಾಡುಗಳಲ್ಲಿ ಬೆಂಕಿ ಅನಾಹುತ ಹೆಚ್ಚಾಗ ತೊಡಗಿದೆ. ಬೆಳ್ತಂಗಡಿಯ ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದಿದ್ದು ಸಮೀಪದ  ರಬ್ಬರ್ ತೋಟಕ್ಕೂ ಬೆಂಕಿ ವ್ಯಾಪಿಸಿದೆ.


ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರು ನಂದಿಸುವ ಕಾರ್ಯ ಮಾಡಿದರೂ ಬೆಂಕಿ ಎರಡು ಎಕರೆ ರಬ್ಬರ್ ಗುಡ್ಡ ಸೇರಿದಂತೆ 5 ಎಕರೆಯಷ್ಟು ಗುಡ್ಡದಲ್ಲಿ ಬೆಂಕಿ ವ್ಯಾಪಿಸಿದೆ.


ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ ಈಗಾಗಲೇ ಎರಡು  ಅಗ್ನಿಶಾಮಕ ಇಲಾಖೆಯ ತಂಡಗಳು, ಲಾಯಿಲ ಗ್ರಾಮ  ಪಂಚಾಯತ್ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಶತಪ್ರಯತ್ನ ಮಾಡುತಿದ್ದಾರೆ. ಕಳೆದ ವಾರವಷ್ಟೇ ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಅಗ್ನಿಶಾಮಕ ಇಲಾಖೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿತ್ತು. ಸ್ಥಳೀಯರ ಸಮಯಪ್ರಜ್ಙೆಯಿಂದ ದೊಡ್ಡ ಅನಾಹುತ ತಪ್ಪಿತ್ತು.

 

 

 


Share Information
Advertisement
Click to comment

You must be logged in to post a comment Login

Leave a Reply