Connect with us

KARNATAKA

ಕಾಮದಾಹಕ್ಕೆ ತನ್ನ ಅಂಗಊನ ಮಗುವನ್ನೇ ಮುಗಿಸಿದ ಪಾತಕಿ ತಾಯಿ..!

ಧಾರವಾಡ : ತನ್ನ ಕಾಮದಾಹಕ್ಕೆ ಮಗು ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ತನ್ನ ರಕ್ತವನ್ನೇ ಹಂಚಿಕೊಂಡು ಹುಟ್ಟಿದ್ದ ಮಗುವನ್ನು ಮಹಿಳೆಯೋರ್ವಳು ಭೀಕರವಾಗಿ ಕೊಂದು ಹಾಕಿದ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

 

ಆರಂಭದಲ್ಲಿ ಮಗು ಮೇಲಿಂದ ಬಿದ್ದು ಮೃತಪಟ್ಟಿದ್ದೆ ಎಂದು ನಾಟವಾಡಿದ ಘಟನೆಯನ್ನು ಪೊಲೀಸರು ಬಯಲು ಮಾಡಿದ್ದು ಮಹಿಳೆಯನ್ನು ಬಂಧಿಸಿ ಜೈಲಿಗಟಿದ್ದಾರೆ. ಏಳು ವರ್ಷಗಳ ಹಿಂದೆ ಸವದತ್ತಿಯ ಕಲ್ಲಯ್ಯ ಹಿರೇಮಠ ಹಾಗೂ ಧಾರವಾಡ ನಗರದ ಕಮಲಾಪುರ ಬಡಾವಣೆಯ ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಐದು ವರ್ಷಗಳ ಹಿಂದೆ ಅವಳಿ-ಜವಳಿ ಹೆಣ್ಣು ಮಕ್ಕಳಾಗಿದ್ದವು.ಅದರಲ್ಲಿ ಒಂದು ಹೆಣ್ಣು ಮಗು ಸಹನಾಳಿಗೆ ಎರಡೂ ಕಾಲುಗಳೇ ಇರಲಿಲ್ಲ. ಅಲ್ಲದೇ ಆಕೆ ಕೊಂಚ ಮಂದಬುದ್ಧಿಯವಳೂ ಆಗಿದ್ದಳು. ಆದರೆ ದಂಪತಿ ಮಧ್ಯೆ ಜಗಳ ಶುರುವಾಗಿ ಅದು ಡೈವೋರ್ಸ್ ವರೆಗೆ ಬಂತು. ಕೊನೆಗೆ ಕಲ್ಲಯ್ಯನಿಂದ ಡೈವೋರ್ಸ್ ಪಡೆದ ಜ್ಯೋತಿ ಮಕ್ಕಳೊಂದಿಗೆ ಬಂದು ತಾಯಿಯ ಮನೆಯಲ್ಲಿಯೇ ವಾಸವಾಗಿದ್ದಳು. ಹುಬ್ಬಳ್ಳಿಯ ನವನಗರದ ರಾಹುಲ್ ತೆರದಾಳ್ ಅನ್ನೋ 22 ವರ್ಷದ ಯುವಕನೊಂದಿಗೆ ದೋಸ್ತಿ ಮಾಡಿಕೊಂಡ ಮಹಿಳೆ ಇನ್ನೊಬನ ಜೊತೆ ಸಂಬಂದಬೆಳೆಸಿದ್ದಳು ಆತನು ಆಗಾಗ ಮನೆಗೆ ಬಂದು ಜ್ಯೋತಿ ಜೊತೆ ಚೆಕ್ಕಂದವಾಡಿ ಹೋಗುತ್ತಿದ್ದ.ಮೊನ್ನೆ ಗುರುವಾರವೂ ಸಂಜೆ ಹೊತ್ತಿಗೆ ರಾಹುಲ್ ಮನೆಗೆ ಬಂದಿದ್ದು ಆ ಸಮಯದಲ್ಲಿ ಮಗುವಿನ ಕತ್ತು ಕತ್ತರಿಸಿ ಹೋಗಿತ್ತು,ಮಗು ಮೇಲಿಂದ ಬಿದ್ದಿದೆ ಎಂದು ತಾಯಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದು ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿ ಜ್ಯೋತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಮಗುವಿನ ಕತ್ತನ್ನು ಕೊಯ್ದಿರೋದು ಬೆಳಕಿಗೆ ಬಂದಿದೆ. ಮನೆಯವರು ಇವರ ಅಕ್ರಮ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಎರಡು ವರ್ಷಗಳ ಹಿಂದಿನಿಂದಲೂ ರಾಹುಲ್ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಳು .ಆದರೆ ಮನೆಯವರಿಗೂ ಈಕೆ ಬೆದರಿಕೆ ಹಾಕಿ, ಸುಮ್ಮನೆ ಇರುವಂತೆ ಮಾಡಿದ್ದಳು. ಮನೆಯವರ ಕಿರಿಕಿರಿ ಹೆಚ್ಚಾಗುತ್ತಿದ್ದಂತೆಯೇ ಈಕೆ ಅದೇ ಮನೆಯಲ್ಲಿನ ಮೇಲಿನ ಮನೆಗೆ ಶಿಫ್ಟ್ ಆಗಿದ್ದಳು.ಈ ಮಧ್ಯೆ ರಾಹುಲಳನ್ನು ಮದುವೆಯಾಗುವಂತೆ ಒತ್ತಾಯ ಮಾಡಲು ಶುರು ಮಾಡಿದ್ದಾಳೆ.

ಆದರೆ ಈಗಾಗಲೇ ನಿನಗೆ ಎರಡು ಮಕ್ಕಳಿದ್ದು, ಅದರಲ್ಲಿ ಒಂದು ಮಗು ವಿಶೇಷ ಚೇತನ ಇದೆ. ಇಂಥ ವೇಳೆಯಲ್ಲಿ ಮದುವೆಯಾಗೋದು ಹೇಗೆ ಅಂತಾ ರಾಹುಲ್ ಪ್ರಶ್ನಿಸಿದ್ದಾನೆ. ಈ ಇಬ್ಬರ ಜಗಳದಲ್ಲಿ ಮಗು ಕೊಲೆಯಾಗಿದೆ. ಮಗುವನ್ನು ತರಕಾರಿ ಕತ್ತರಿಸಲು ಬಳಸೋ ಈಳಿಗೆಯಿಂದ ಕುತ್ತಿಗೆ ಕೊಯ್ದು ಜ್ಯೋತಿಯೇ ಕೊಂದು ಹಾಕಿದ್ದಾಳೆ. ಬಳಿಕ ಮಗು ಮೇಲಿನಿಂದ ಬಿದ್ದು ಗಾಯ ಮಾಡಿಕೊಂಡಿದೆ ಅಂತಾ ಕಥೆ ಕಟ್ಟಿದ್ದಾಳೆ.ಪ್ರೀತಿಸಿ ಮದುವೆಯಾಗೋದಕ್ಕೂ ಮುಂಚೆ ಜ್ಯೋತಿ ಮತ್ತೊಂದು ಮದುವೆ ಆಗಿದ್ದಳಂತೆ. ಆತನೊಂದಿಗೂ ಸಂಸಾರ ಮಾಡದೇ ಕಲ್ಲಯ್ಯನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳು. ಆಕೆಯ ಪ್ರೀತಿಯ ಜಾಲಕ್ಕೆ ಬಿದ್ದ ಕಲ್ಲಯ್ಯ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದ. ಆದರೆ ಇದೀಗ ಆತನಿಗೂ ಡೈವೋರ್ಸ್ ಕೊಟ್ಟು ಮತ್ತೊಬ್ಬನ ಸಂಗ ಮಾಡಿ, ಕೊನೆಗೆ ತನ್ನ ಮಗಳನ್ನೇ ಕೊಲೆಗೈದು ತಾಯಿ ಅನ್ನೋ ಪದಕ್ಕೆ ಅಪವಾದ ತಂದಿದ್ದಾಳೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಯೋತಿ ಹಾಗೂ ರಾಹುಲ್​ನನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *