KARNATAKA
ಹಿಂದುತ್ವ ಪಾಲಿಸೋದರಲ್ಲಿ ಬಿಜೆಪಿಗಿಂತ ಮುಂದೆ – ಸಿಎಂ ಕುಮಾರಸ್ವಾಮಿ
ಹಿಂದುತ್ವ ಪಾಲಿಸೋದರಲ್ಲಿ ಬಿಜೆಪಿಗಿಂತ ಮುಂದೆ – ಸಿಎಂ ಕುಮಾರಸ್ವಾಮಿ
ಉಡುಪಿ ಅಕ್ಟೋಬರ್ 30: ನಾವು ಹಿಂದುತ್ಪ ಪಾಲಿಸೋದರಲ್ಲಿ ಬಿಜೆಪಿಯವರಿಗಿಂತ ಮುಂದೆನೇ ಇದ್ದೇವೆ. ಹಿಂದುತ್ವದ ಹೆಸರಲ್ಲಿ ಆಯ್ಕೆಯಾದ ರಾಜಕೀಯ ನಾಯಕರು ನಿಮ್ಮ ಕಷ್ಟ ಕೇಳಲು ಬರಲ್ಲ, ಸದನದಲ್ಲಿ ಮಾತನಾಡುವುದಿಲ್ಲ, ಕೇವಲ ಭಾವನಾತ್ಮಕ ವಿಷಯ ಮುಂದಿಟ್ಟು ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿಯ ತ್ರಾಸಿಯಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಚಾರ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ ಕರಾವಳಿ ಜನ ಯಾಕೆ ಹಿಂದುತ್ವದ ಹೆಸರು ಇಟ್ಕೊಂಡು ಸಂಘರ್ಷ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಈ ಸಂಘರ್ಷದಲ್ಲಿ ಅಮಾಯಕ ಹಿಂದೂ, ಮುಸಲ್ಮಾನರು ಜೀವ ಕಳೆದುಕೊಳ್ತಾರೆ. ಅಮಾಯಕ ರ ಜೀವ ತೆಗೆದು ರಾಜಕೀಯ ಮುಖಂಡರು ಅಧಿಕಾರವನ್ನು ಅನುಭಿಸುತ್ತಾರೆ. ನಿಮ್ಮನ್ನು ಕೆರಳಿಸಿ ಅವರು ಎಸಿ ರೂಂ ನಲ್ಲಿ ಕೂತ್ಕೋತಾರೆ, ನೀವು ಬೀದಿಯಲ್ಲಿ ಇರ್ತೀರಾ ಎಂದು ಹೇಳಿದರು.
ದೀಪಾವಳಿ ಹಬ್ಬಕ್ಕೆ ಸರ್ಕಾರ ಬೀಳುತ್ತೆ ಎಂದು ಬಿಜೆಪಿಯವರು ಕನಸು ಕಾಣ್ತಾ ಕೂತಿದಾರೆ. ಎಷ್ಟು ದಿನ ಆಡಳಿತ ನಡೆಸಬೇಕು ಅಂತ ದೇವರು ನಿರ್ಧಾರ ಮಾಡಿಯಾಗಿದೆ ಅದನ್ನು ಯಡ್ಯೂರಪ್ಪ ಅವರಿಂದ ತಡೆಯಲು ಆಗಲ್ಲ ಎಂದು ಹೇಳಿದರು. ಆರನೇ ತಾರೀಖಿನ ನಂತರ ನಾನು ಮನೆಗೆ ಹೋಗುತ್ತೆನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ನಾನು ಯಡ್ಯೂರಪ್ಪ ಮನೆಗೆ ಹೋಗ್ತೇನೆ, ಎರಡು ದಿನ ಕೂತು ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡೋಣ ಎಂದು ಹೇಳಿದರು.