DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುುತ್ತಿರುವ ಭಾರಿ ಮಳೆ ನದಿ ಪಾತ್ರಗಳಲ್ಲಿ ಪ್ರವಾಹ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುುತ್ತಿರುವ ಭಾರಿ ಮಳೆ ನದಿ ಪಾತ್ರಗಳಲ್ಲಿ ಪ್ರವಾಹ
ಪುತ್ತೂರು ಅಗಸ್ಟ್ 16 ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ-ಗಾಳಿ ಸುರಿಯುತ್ತಿದ್ದು, ಮಳೆ ನೀರಿನಿಂದಾಗಿ ನದಿ-ಹೊಳೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ನದಿ ಪಾತ್ರಗಳಲ್ಲಿ ಪ್ರವಾಹ ಸೃಷ್ಟಿಸಿದೆ.
ಸುಬ್ರಹ್ಮಣ್ಯದ ನೂಜಿಲ,ಕುಲ್ಕುಂದ, ಕುದುರೆಮಜಲು ಮೊದಲಾದ ಭಾಗಗಳಲ್ಲಿ ಪ್ತವಾಹ ನೀರಿನಿಂದಾಗಿ ನೂರಕ್ಕೂ ಮಿಕ್ಕಿದ ಮನೆಗಳು ಸಂಕಷ್ಟಕ್ಕೀಡಾಗಿವೆ. 3 ಮನೆಗಳು ಈಗಾಗಲೇ ಸಂಪೂರ್ಣ ಮುಳುಗಡೆಯಾಗಿದ್ದು, ಉಳಿದ ಮನೆಗಳೂ ಮುಳುಗಡೆಯಾಗುವ ಭೀತಿಯಲ್ಲಿದೆ.

ನದಿ ಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವ ವ್ಯವಸ್ಥೆ ಇಂದೂ ಮುಂದುವರಿದಿದೆ. ನದಿ ಪ್ರವಾಹದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮುಖ್ಯ ರಸ್ತೆಗಳು ಬಂದ್ ಆಗಿವೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯು ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದ್ದ ನದಿ ಪಾತ್ರದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಭಾರೀ ಮಳೆ ಹಿನ್ನಲೆಯಲ್ಲಿ ಬಂಟ್ಚಾಳ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೂ ಮುಂಜಾಗೃತಾ ಕ್ರಮವಾಗಿ ರಜೆ ಘೋಷಿಸಲಾಗಿದೆ.