Connect with us

    LATEST NEWS

    ಕೇರಳದ ಪ್ರವಾಹ – ಶಬರಿಮಲೆ ಯಾತ್ರೆ ಕೈಗೊಳ್ಳದಂತೆ ಕೇರಳ ಸರಕಾರ ಸೂಚನೆ

    ಕೇರಳದ ಪ್ರವಾಹ – ಶಬರಿಮಲೆ ಯಾತ್ರೆ ಕೈಗೊಳ್ಳದಂತೆ ಕೇರಳ ಸರಕಾರ ಸೂಚನೆ

    ಕೇರಳ ಅಗಸ್ಟ್ 16: ದೇವರನಾಡು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮ ಸ್ಥಿತಿಗೆ ತಲುಪುತ್ತಿದೆ. ಮಳೆ ಆರ್ಭಟ ಇಂದು ಕೂಡ ಮುಂದುವರಿದಿದ್ದು. ಶತಮಾನದಲ್ಲೇ ಕಂಡರಿಯದ ಭೀಕರ ಪ್ರವಾಹಕ್ಕೆ ಇಡೀ ರಾಜ್ಯ ತತ್ತರಿಸಿದೆ. ಭೂಕುಸಿತ ಮತ್ತು ಪ್ರವಾಹದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

    ಕೇರಳದ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 35 ಜಲಾಶಯಗಳು ಭರ್ತಿಯಾಗಿದ್ದು, ಎಲ್ಲಾ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ.

    ಹವಾಮಾನ ಇಲಾಖೆ ಈಗಾಗಲೇ ಮುಂದಿನ ನಾಲ್ಕು ದಿನಗಳವರೆಗೆ ಭಾರಿ ಮಳೆ ಸುರಿಯುವುದಾಗಿ ಮುನ್ಸೂಚನೆ ನೀಡಿದ್ದು, ಇಡೀ ರಾಜ್ಯದಾದ್ಯಂತ ಕಟ್ಟೆಚ್ಚರ (ರೆಡ್‌ ಅಲರ್ಟ್‌) ಘೋಷಿಸಲಾಗಿದೆ.

    ಜಲಾಶಯಗಳ ಕೆಳಭಾಗದ ತಗ್ಗುಪ್ರದೇಶದ ಜನರು ಮುಳುಗಡೆ ಭೀತಿ ಎದುರಿಸುತ್ತಿದ್ದಾರೆ. ಕಾಸರಗೋಡಿನಿಂದ ತಿರುವನಂತಪುರದವರೆಗೆ ಎಲ್ಲಾ ನದಿಗಳಲ್ಲೂ ಪ್ರವಾಹ ಉಕ್ಕೇರಿದೆ.

    ಪಂಪಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಅಯ್ಯಪ್ಪಸ್ವಾಮಿ ಭಕ್ತರು ಸದ್ಯಕ್ಕೆ ಶಬರಿಮಲೈ ಯಾತ್ರೆ ಕೈಗೊಳ್ಳಬಾರದು ಎಂದು ಕೇರಳ ಸರ್ಕಾರ ಸೂಚನೆ ನೀಡಿದೆ.

    ನಿನ್ನೆ ವಿಶೇಷ ಪೂಜೆ ನಿಗದಿಯಾಗಿದ್ದರೂ, ನದಿ ಉಕ್ಕಿ ಹರಿಯುತ್ತಿರುವುದರಿಂದ ಭಕ್ತಾದಿಗಳಿಗೆ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ಮುಂದಿನ ಆದೇಶದವರೆಗೆ ಶಬರಿಮಲೆ ಯಾತ್ರೆ ಕೈಗೊಳ್ಳಬಾರದೆಂದು ಭಕ್ತಾಧಿಗಳಿಗೆ ಕೇರಳ ಸರಕಾರ ಸೂಚನೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply