BANTWAL
ರಾಜ್ಯೋತ್ಸವ ವೇದಿಕೆಯಲ್ಲೂ ಫೋಟೋ ಹುಚ್ಚು, ಶಿಷ್ಟಾಚಾರ ಮುರಿದ ವೆಂಕಪ್ಪ ವಿರುದ್ದ ಹೊತ್ತಿದೆ ಕಿಚ್ಚು…
ರಾಜ್ಯೋತ್ಸವ ವೇದಿಕೆಯಲ್ಲೂ ಫೋಟೋ ಹುಚ್ಚು, ಶಿಷ್ಟಾಚಾರ ಮುರಿದ ವೆಂಕಪ್ಪ ವಿರುದ್ದ ಹೊತ್ತಿದೆ ಕಿಚ್ಚು…
ಬಂಟ್ವಾಳ ನವೆಂಬರ್ 1: ಕೆಲವರಿಗೆ ಫೋಟೋ ದಲ್ಲಿ ಕಾಣಿಸಿಕೊಳ್ಳುವ ಹುಚ್ಚು ಎಷ್ಟರಮಟ್ಟಿಗೆ ಇರುತ್ತೇ ಅಂದ್ರೆ ಇಂಥ ವ್ಯಕ್ತಿಗಳಿಗೆ ಕಾನೂನು, ನೀತಿ- ನಿಯಮ, ಶಿಷ್ಟಾಚಾರ ಎಂಬುದರ ಪರಿವೇ ಇರೋದಿಲ್ಲ. ಇಂಥಹುದೇ ಒರ್ವ ಪುಡಿ ರಾಜಕಾರಣಿಯೊಬ್ಬ ಫೋಟೋ ಹುಚ್ಚಿಗಾಗಿ ಸರಕಾರಿ ಶಿಷ್ಟಾಚಾರ ಮುರಿದ ಘಟನೆ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ನಡೆದಿದೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇಂದು ಹಮ್ಮಿಕೊಂಡಿತ್ತು. ಸರಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದ್ದರಿಂದ ಕೆಲವೊಂದು ಶಿಷ್ಟಾಚಾರ ವನ್ನು ಪಾಲಿಸಬೇಕಾದ ನಿಯವೂ ಇಲ್ಲಿರುತ್ತದೆ. ಧ್ವಜವಂದನೆ ಬಳಿಕ ಪೋಲೀಸ್ ಕವಾಯತನ್ನೂ ಕೂಡಾ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಲಾಗುತ್ತದೆ.
ಧ್ವಜ ವಂದನೆ ಸಂದರ್ಭದಲ್ಲಿ ದ್ವಜದ ಬಳಿ ಸ್ಥಳೀಯ ಶಾಸಕ, ಸಹಾಯಕ ಕಮಿಷನರ್, ತಹಶಿಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಸರಕಾರದ ಪ್ರತಿನಿಧಿಗಳು ಮಾತ್ರ ಧ್ವಜದ ಬಳಿ ಇರಬೇಕೆಂಬ ಶಿಷ್ಟಾಚಾರವೂ ಇದೆ. ಆದರೆ ಬಂಟ್ವಾಳದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಆಪ್ತ, ಪುಡಿ ಜನಪ್ರತಿನಿಧಿಯೊಬ್ಬ ನುಗ್ಗಿ ಗೊಂದಲಕ್ಕೆ ಕಾರಣನಾಗಿದ್ದಾನೆ.
ವೆಂಕಪ್ಪ ಪೂಜಾರಿ ಎನ್ನುವ ಈ ವ್ಯಕ್ತಿಗೆ ರಮಾನಾಥ ರೈ ಜೊತೆಗೆ ಸ್ಟೇಜ್ ಹತ್ತುವ ಹುಚ್ಚಿದ್ದು, ತನ್ನ ಹಿಂದಿನ ಚಪಲವನ್ನೂ ಇಂದೂ ಕೂಡಾ ತೋರಿಸುವ ಮೂಲಕ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಲ್ಲಿ ಮುಜುಗರ ಮೂಡಿಸಿದ್ದಾರೆ.ಲೈಟ್ ಫ್ಲಾಷ್ ಆಯಿತೆಂದರೆ ಸಾಕು ಹಲ್ಲು ಕಿರಿದು ಫೋಸ್ ನೀಡುವ ಇಂಥ ವ್ಯಕ್ತಿಗಳಿಂದಾಗಿ ನಿಜವಾಗಿ ಗುರುತಿಸಿಕೊಳ್ಳಬೇಕಾದ ವ್ಯಕ್ತಿಗಳು ಮಾತ್ರ ಔಟ್ ಆಫ್ ಫೋಕಸ್ ಆಗುತ್ತಿರುವುದಂತು ಸತ್ಯ.