Connect with us

    LATEST NEWS

    ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ನಲ್ಲಿ 23 ಪದಕ ಗೆದ್ದ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್

    ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ನಲ್ಲಿ 23 ಪದಕ ಗೆದ್ದ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್

    ಮಂಗಳೂರು ನವೆಂಬರ್ 1 2018-19 ನೇ ಸಾಲಿನ ಸ್ಪೀಡ್ ರೋಲರ್ ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ಅಕ್ಟೋಬರ್ 27 ಮತ್ತು 28ರಂದು ಮಂಗಳೂರಿನ ಅಶೋಕ್ ನಗರದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ, ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಆಶ್ರಯದಲ್ಲಿ ನಡೆಯಿತು.

    8 ವರ್ಷ ಕೆಳಗಿನ ವಿಭಾಗದಲ್ಲಿ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ 15 ಸ್ಕೇಟರ್‌ಗಳು ಭಾಗವಹಿಸಿ, 5 ಚಿನ್ನ, 5 ಬೆಳ್ಳಿ ಮತ್ತು 13 ಕಂಚಿನ ಪದಕಗಳ ಸಹಿತ ಒಟ್ಟು 23 ಪದಕಗಳನ್ನು ಪಡೆದರು.

    ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಗಳಾದ ಆಯುಷ್ ಲೆಹೆಲ್ ಮಹೇಶ್ 2 ಚಿನ್ನ, ಸೈದಾ ಐರಾ ಸಫಿಯಾ 2 ಚಿನ್ನ, ಶನೋನ್ ಜಾಯೆಲ್ ಪ್ರಸಾದ್ 1 ಚಿನ್ನ 1 ಬೆಳ್ಳಿ, ರಿಷಾ ಶೆಟ್ಟಿ 2 ಬೆಳ್ಳಿ, ತಕ್ಷಕ್ ಎ. ಶೆಟ್ಟಿ 2 ಬೆಳ್ಳಿ, ಆಲಿಯಾ ನೀಲಗಾರ್ 2 ಕಂಚು, ದೇವಿಕಾ ಎಂ. 2 ಕಂಚು,ಆರುಷ್ ಎ ಪುತ್ರನ್ 2 ಕಂಚು,ಕೆ.ಜೆ. ಶ್ರೀ ದತ್ತ್ 2 ಕಂಚು,ನಿಝಾ ಆಯೆಷಾ ನಝೀಬ್ 2 ಕಂಚು, ಅಭಿನಂದ್ ಡಿ ಶೆಟ್ಟಿ 2 ಕಂಚು, ಪಿ. ಧನ್ವಿ ಶಾಂತಾರಾಮ್ 1 ಕಂಚು, ದೇಶಿಕ್ ಎಂ 1 ಕಂಚು ಪದಕಗಳನ್ನು ಪಡೆದರು.

    ಪದಕ ವಿಜೇತ ವಿದ್ಯಾರ್ಥಿಗಳೆಲ್ಲರೂ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರರಾದ ಮೋಹನ್ ದಾಸ್, ಜಯರಾಜ್ ಮತ್ತು ರಮಾನಂದ್ ಯು. ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply