DAKSHINA KANNADA
ಗುಂಡ್ಯ : ಮೀನು ಹಿಡಿಯಲು ತೆರಳಿದ ವ್ಯಕ್ತಿ ನಾಪತ್ತೆ

ಗುಂಡ್ಯ : ಮೀನು ಹಿಡಿಯಲು ತೆರಳಿದ ವ್ಯಕ್ತಿ ನಾಪತ್ತೆ
ಪುತ್ತೂರು ಫೆಬ್ರವರಿ 22: ಮೀನು ಹಿಡಿಯಲೆಂದು ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ. ಪೋಲೀಸರ ಸಹಕಾರದೊಂದಿಗೆ ಮುಳುಗು ತಜ್ಞರು ಮೃತದೇಹ ಪತ್ತೆ ಹಚ್ಚಿದ್ದಾರೆ.
ನಾಪತ್ತೆಯಾಗಿರುವವರನ್ನು ಶಿರಾಡಿ ಗ್ರಾಮದ ಬಾಕಿಲ ಗದ್ದೆ ನಿವಾಸಿ ಚೋಮ ಮುಗೇರ ಎಂಬವರ ಪುತ್ರ ಹರೀಶ್(26) ಎಂದು ಗುರುತಿಸಲಾಗಿದೆ. ಶುಕ್ರವಾರದಂದು ಹರೀಶ್ ಎಂಬವರು ನದಿ ನೀರಿನಲ್ಲಿ ಕಣ್ಮರೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ ಗಳು ಹಾಗೂ ಸ್ಥಳೀಯ ನದಿಯಲ್ಲಿ ಹುಡುಕಾಡಿದ್ದರು. ಇದೀಗ ಪೋಲೀಸರ ಸಹಕಾರದೊಂದಿಗೆ ಮುಳುಗು ತಜ್ಞರು ಮೃತದೇಹ ಪತ್ತೆ ಹಚ್ಚಿದ್ದಾರೆ.
