ಪಾಕಿಸ್ತಾನ ಪರ ಘೋಷಣೆ ಹಿನ್ನಲೆ ಮಂಗಳೂರು ಕಾರ್ಯಕ್ರಮಕ್ಕೆ ಮಿಸ್ಸಾದ ಹೋರಾಟಗಾರ್ತಿ ಅಮೂಲ್ಯ ಪ್ರವಚನ….!

ಮಂಗಳೂರು ಫೆಬ್ರವರಿ 21: ಬೆಂಗಳೂರಿನಲ್ಲಿ ನಿನ್ನೆ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಳನ್ನು ಮಂಗಳೂರಿನಲ್ಲಿ ಫೆಬ್ರವರಿ 25 ರಂದು ನಡೆಯಲಿರುವ ಪೌರತ್ವ ವಿರೋಧಿ ಸಮಾವೇಶದಿಂದ ಹೊರಹಾಕಲಾಗಿದೆ.

ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ್ದರು. ಜೆಡಿಎಸ್ ಕಾರ್ಪೋರೇಟರ್ ಒಬ್ಬರು ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಭಾಗವಹಿಸಿದ್ದರು.

ಪಾಕ್ ಪರ ಘೋಷಣೆ ಕೂಗಿ ಈಗ ದೇಶದ್ರೋಹ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನ್ ಮಂಗಳೂರಿನಲ್ಲಿ ಫೆಬ್ರವರಿ 25 ರಂದು ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿಯಲ್ಲಿ ಏರ್ಪಡಿಸಲಾಗಿದ್ದ ಪೌರತ್ವ ವಿರೋಧಿ ಸಮಾವೇಶಕ್ಕೆ ಪ್ರಮುಖ ಭಾಷಣಕಾರಳಾಗಿ ಆಹ್ವಾನಿಸಲಾಗಿತ್ತು.

ಈಗ ಅಮೂಲ್ಯ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಹಿನ್ನಲೆಯಲ್ಲಿ ಅಮೂಲ್ಯಳ ವಿಮಾನ ಟಿಕೆಟ್ ನ್ನು ಆಯೋಜಕರು ರದ್ದು ಮಾಡಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಿಂದ ಅಮೂಲ್ಯ ಳ ಹೆಸರು ಡಿಲೀಟ್ ಮಾಡಲಾಗಿದೆ. ನಿನ್ನೆಯ ಘಟನೆಯ ಬಳಿಕ ಸಂಘಟನೆಗಳು ಅಮೂಲ್ಯ ಳಿಂದ ಅಂತರ ಕಾಯ್ದುಕೊಂಡಿವೆ.