LATEST NEWS
ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ 6 ಮಂದಿ ಮೀನುಗಾರರ ಮೃತದೇಹ ಪತ್ತೆ
ಮಂಗಳೂರು ಡಿಸೆಂಬರ್ 2: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಅರಬ್ಬಿ ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದ ಘಟನೆಯಲ್ಲಿ ನಾಪತ್ತೆಯಾದ ಆರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ನಿನ್ನೆ ಮೂವರು ಶವಪತ್ತೆಯಾಗಿತ್ತು. ಇಂದು ಮತ್ತೆ ಉಳಿದ ಮೀನುಗಾರರ ಶವಪತ್ತೆಯಾಗಿದೆ.
ಇಂದು ಪತ್ತೆಯಾದ ಶವ ಜೀಯಾ ಮತ್ತು ಹಸೈನಾರ್ ಎಂಬುವವರದಾಗಿದ್ದು, ಬೋಟ್ ಮುಳುಗಡೆಯಾಗಿ ನಾಪತ್ತೆಯಾಗಿದ್ದ 6 ಮಂದಿಯ ಶವವಾಗಿ ಪತ್ತೆಯಾಗಿದ್ದಾರೆ. ಪ್ರೀತಂ, ಪಾಂಡುರಂಗ, ಚಿಂತನ್ ,ಅನ್ಸರ್, ಜೀಯಾ, ಹಸೈನಾರ್ ಮೃತರಾಗಿದ್ದಾರೆ. ಎಲ್ಲಾ ಕಣ್ಮರೆಯದ ಮೀನುಗಾರರ ಮೃತದೇಹ ಪತ್ತೆಯಾದ ಹಿನ್ನಲೆ ಅರಬ್ಬೀ ಸಮುದ್ರ ದುರಂತ ಪ್ರಕರಣದ ಕಾರ್ಯಚರಣೆ ಅಂತ್ಯಗೊಳಿಸಲಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ಸೋಮವಾರ ರಾತ್ರಿ ಪಲ್ಟಿಯಾಗಿದ್ದು, ಬೋಟ್ ನಲ್ಲಿದ್ದ 20 ಮಂದಿ ಮೀನುಗಾರರಲ್ಲಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ಬೋಟ್‌ನಲ್ಲಿ ಮೀನು ಲೋಡ್ ಅಧಿಕವಾಗಿದ್ದರಿಂದ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೋಟ್‌ನಲ್ಲಿ 20 ಮೀನುಗಾರರಿದ್ದು, 16 ಮಂದಿ ಡಿಂಗಿಯಲ್ಲಿ ಕುಳಿತು ದಡ ಸೇರಿದ್ದರು, ನಾಪತ್ತೆಯಾಗಿದ್ದ 6 ಮಂದಿ ಮೀನುಗಾರರನ್ನು ಹುಡುಕಲು ಕರಾವಳಿ ಕಾವಲು ಪಡೆಯ ತಂಡ ಸೇರಿದಂತೆ ಸ್ಥಳೀಯ ಮೀನುಗಾರರು ಶೋಧ ಕಾರ್ಯಾಚರಣೆ ನಡೆಸಿದ್ದರು.