LATEST NEWS
ಮೀನುಗಾರಿಕೆ ಆರಂಭದ ಜೊತೆಗೆ ಕಡಲಲ್ಲಿ ಬೋಟ್ ಗೆ ಬೆಂಕಿ

ಮಂಗಳೂರು ಅಗಸ್ಟ್ 05: ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕಾ ಋತು ಆರಂಭವಾಗಿದೆ. ಮಳೆ ಹವಾಮಾನ ವೈಪರಿತ್ಯದ ನಡುವೆ ಈ ಬಾರೀ ಮೀನುಗಾರಿಕಾ ಪ್ರಾರಂಭವಾಗಿದ್ದು,, ಇದರ ಬೆನ್ನಲ್ಲೇ ಕಡಲಿನಲ್ಲಿ ಮೊದಲ ಅವಘಡ ಸಂಭವಿಸಿದೆ. ಮಂಗಳೂರಿನ ದಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ಇಂದು ಬೆಳಗ್ಗಿನ ಜಾವ ಸಮುದ್ರ ಮಧ್ಯೆ ಬೆಂಕಿ ಹೊತ್ತಿಕೊಂಡು ಮುಳುಗಿತು.
ಹುಸೈನ್ ಎಂಬವರ ಮಾಲೀಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಬೆಳಗಿನ ಜಾವ 3ರಿಂದ 4 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೋಟ್ನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಿಸಿದ್ದಾರೆ. ಸುಮಾರು 1 ಕೋಟಿಗೂ ಅಧಿಕ ನಷ್ಟ ಸಂಭವಸಿದೆ ಎಂದು ಹೇಳಲಾಗಿದೆ.
