LATEST NEWS
ಬಾಂಗ್ಲಾದೇಶದಲ್ಲಿ ಕ್ಷಿಪ್ರ ದಂಗೆ – ಹೈ ಅಲರ್ಟ್ ನಲ್ಲಿ ಬಿಎಸ್ಎಫ್
ನವದೆಹಲಿ ಅಗಸ್ಟ್ 05: ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರ ದಂಗೆಯಲ್ಲಿ ಸೇನೆ ಇದೀಗ ಅಧಿಕಾರವಹಿಸಿಕೊಂಡಿದ್ದು, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನವಾಗಿದ್ದಾರೆ. ಇದರೊಂದಿಗೆ ಇದೀಗ ಬಾಂಗ್ಲಾದೇಶದ ರಾಜಕೀಯ ಸ್ಥಿತಿ ಅಸ್ಥಿರವಾಗಿದ್ದು, ಈ ಹಿನ್ನಲೆ 4,096 ಕಿ.ಮೀ ಉದ್ದದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್) ಹೈ ಅಲರ್ಟ್ ಘೋಷಿಸಿದೆ.
ಪರಿಸ್ಥಿತಿ ಕುರಿತಂತೆ ಅವಲೋಕನ ನಡೆಸಲು ಬಿಎಸ್‌ಎಫ್ ಡಿಜಿ ದಲ್ಜಿತ್ ಸಿಂಗ್ ಚೌಧರಿ ಮತ್ತು ಇತರೆ ಹಿರಿಯ ಅಧಿಕಾರಿಗಳು ಕೋಲ್ಕತ್ತಗೆ ಬಂದಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ. ಎಲ್ಲ ಸಿಬ್ಬಂದಿಯನ್ನು ಕೂಡಲೇ ಗಡಿ ಭದ್ರತೆಗೆ ನಿಯೋಜಿಸುವಂತೆ ಎಲ್ಲ ಫೀಲ್ಡ್ ಕಮಾಂಡರ್‌ಗಳಿಗೆ ಡಿಜಿ ನಿರ್ದೇಶನ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದಾಗಿನಿಂದ ಬಾಂಗ್ಲಾ ಗಡಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಸಿಬ್ಬಂದಿಯ ರಜೆಗಳನ್ನು ರದ್ದು ಮಾಡಲಾಗಿದ್ದು, ಈಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈಶಾನ್ಯ ಭಾರತದ ಐದು ರಾಜ್ಯಗಳು ಬಾಂಗ್ಲಾದೇಶದ ಜೊತೆ ಗಡಿ ಹಂಚಿಕೊಂಡಿವೆ. ಈ ಪೈಕಿ ಪಶ್ಚಿಮ ಬಂಗಾಳದ ಗಡಿ 2,217 ಕಿ.ಮೀ ಇದೆ. ತ್ರಿಪುರಾ(856 ಕಿ.ಮೀ), ಮೇಘಾಲಯ (443 ಕಿ.ಮೀ), ಅಸ್ಸಾಂ (262 ಕಿ.ಮೀ) ಮತ್ತು ಮಿಜೋರಾಂ (318 ಕಿ.ಮೀ) ಗಡಿ ಹಂಚಿಕೊಂಡಿವೆ.
You must be logged in to post a comment Login